ಹಲವಾರು ವರ್ಷಗಳಿಂದ ಸುಳ್ಯ ಪೈಚಾರು ಭಾಗದಲ್ಲಿ ಸಾಮಾಜಿಕ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪರಿಸರದ ಬಡವರ ಆಶಾ ಕೇಂದ್ರವಾಗಿ ಕಾರ್ಯಚರಿಸುತ್ತಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ರಿ. ಪೈಚಾರ್ ಇದರ ವಾರ್ಷಿಕ ಮಹಾಸಭೆಯು ಆಗಸ್ಟ್ 9ರಂದು ಸಂಜೆ 4:30 ಕ್ಕೆ ನಡೆಯಲಿದೆ. ಮಹಾಸಭೆಯ ಉದ್ಘಾಟನೆಯನ್ನು ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ನೇರವೆರಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಬೂಸಾಲಿ ಕೆಪಿ ವಹಿಸಲಿದ್ದು, ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್ ಮಂಡಿಸಲಿದ್ದಾರೆ.
ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಗೌರಧ್ಯಕ್ಷರಾದ ಎ ಕುಂಞಪಳ್ಳಿ, ಹಾಗೂ ಪೈಚಾರ್ ಎಚ್ ಪಿ ಪೆಟ್ರೋಲ್ ಪಂಪ್ ಮಾಲಕರಾರದ ಸಂತೋಷ್ ಕುಮಾರ್ ಕೈಕಾರ, ಶಾಫಿ ಪ್ರಗತಿ, ಜಯರಾಮ ಎಲ್ ಐಸಿ,
ಎವೈಸಿ ಅಧ್ಯಕ್ಷ ಕರೀಮ್ ಕೆಎಮ್ ಹಾಗು ಎಲ್ಲಾ
ಸದಸ್ಯರುಗಳು ಹಾಗೂ ಊರ ನಾಗರಿಕರು ಭಾಗವಹಿಸಲಿದ್ದಾರೆ. ಮಹಾಸಭೆಯಲ್ಲಿ ವಿಷೇಶವಾಗಿ ಅಧ್ಯಕ್ಷ ಆಕಾಂಕ್ಷಿ ಅಭ್ಯರ್ಥಿಯನ್ನು ಚುನಾವಣೆಯ ಮೂಲಕ ಅಯ್ಕೆ ಗೊಳಿಸಲಾಗುವುದು ಎಂದು ಪ್ರಕಟಣೆ ಯಲ್ಲಿ ಆಡಳಿತ ಸಮಿತಿಯವರು ತಿಳಿಸಿರುತ್ತಾರೆ.
- Friday
- November 15th, 2024