ಜುಲೈ 05 ರಂದು ಅಯೋಧ್ಯೆ ಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ಇರುವುದರಿಂದ ಸಾರ್ವಜನಿಕರು ಯಾವುದೇ ಕೋಮುಗಲಭೆಗಳನ್ನು ಸೃಷ್ಟಿಸುವಂತಹ ಸಂದೇಶ ಗಳನ್ನು ವಾಟ್ಸಾಪ್ ಅಥವಾ ಫೇಸ್ಬುಕ್ನಲ್ಲಿ ಒಂದು ಧರ್ಮಕ್ಕೆ ಮತ್ತು ಇನ್ನೊಂದು ಧರ್ಮಕ್ಕೆ ಧಕ್ಕೆಯಾಗುವಂತೆ ಯಾವುದೇ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು ಮತ್ತು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು. ಯಾರಾದರೂ ಅಂತ ಸಂದೇಶಗಳನ್ನು ರವಾನಿಸಿದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ತಮ್ಮ ಮನೆಯಲ್ಲಿಯಾಗಲು ಅಥವಾ ದೇವಸ್ಥಾನ ಗಳಲ್ಲಿ ದೀಪೋತ್ಸವ ಮಾಡುವಂತ ಸಂದರ್ಭದಲ್ಲಿ ಹೆಚ್ಚು ಜನ ಸೇರಬಾರದು ಮತ್ತು ಯಾವುದೇ ತರಹ ಶಾಂತಿಯನ್ನು ಕದಡದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಳ್ಳಾರೆ ಪೋಲಿಸ್ ಠಾಣೆಯು ಪ್ರಕಟಣೆಯಲ್ಲಿ ತಿಳಿಸಿದೆ.
- Thursday
- November 21st, 2024