Ad Widget

ಯಶಸ್ವಿಯಾಗಿ ಮುನ್ನಡೆಯುತ್ತಿರುವ ದ್ವಿತೀಯ ಹಂತದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ( ರಿ), ಸಹಕಾರ ಭಾರತಿ ದ. ಕ. ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಎಂ.ಸಿ.ಸಭಾಂಗಣದಲ್ಲಿ ನಡೆದ ಎರಡನೇ ವಾರದ ” ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ” ಇದರ ಉದ್ಘಾಟನಾ ಕಾರ್ಯಕ್ರಮ ವನ್ನು ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ರಾದ ಗುರುಮೂರ್ತಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಎ.ಪಿ.ಎಂ.ಸಿ. ಉಪಾಧ್ಯಕ್ಷ ಸಂತೋಷ್ ಜಾಕೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಹಿರಿಯರಾದ ಚಂದ್ರಶೇಖರ್ ತಳೂರು , ಸಹಕಾರ ಭಾರತಿ ಸುಳ್ಯ ಇದರ ಕಾರ್ಯದರ್ಶಿ ಸುದರ್ಶನ್ ಪಾತಿಕಲ್ಲು , ಸಂಯೋಜಕ ವಿನೋದ್ ಬಳ್ಪ ಭಾಗವಹಿಸಿದ್ದರು. ರಾಜೇಶ್ ಮೇನಾಲರವರು ನಿರೂಪಿಸಿದರು , ಸುನಿಲ್ ಕೇರ್ಪಳ ಸ್ವಾಗತಿಸಿ, ಮಹೇಶ್ ಮುಳ್ಳೇಮಜಾಲು ವಂದಿಸಿದರು.
ಈ ವಾರದ ತರಬೇತಿಯಲ್ಲಿ ಮೊಬೈಲ್ ಸರ್ವಿಸ್, ಹೈನುಗಾರಿಕೆ, ಕೃಷಿ ಯಾಂತ್ರೋಪಕರಣ ತರಬೇತಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!