ಸುಳ್ಯ : ಮಂಡೆಕೋಲು ಗ್ರಾಮದ ಅಂಬ್ರೋಟಿ – ಮುಚ್ಚಿರಡಿ ಶ್ರೀ ಉಳ್ಳಾಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಗಲು ದೈವಗಳ ನೇಮ ನಡಾವಳಿಯು ಫೆ. 26ರಂದು ಆರಂಭಗೊಂಡು ಫೆ 28ರ ವರೆಗೆ ನಡೆಯಲಿದೆ. ಫೆ. 25ರಂದು ಪೇರಾಲು ಬಜಪ್ಪಿಲ ಉಳ್ಳಾಗಲು ದೈವಸ್ಥಾನದಲ್ಲಿ ಕುದಿ ಹಾಕುವ ಮೂಲಕ ನೇಮೋತ್ಸವವನ್ನು ಆರಂಭಿಸಲಾಯಿತು. ಫೆ. 26ರಂದು ಬೆಳಿಗ್ಗೆ ಉಗ್ರಾಣ ತುಂಬಿಸಿದ ಅಪರಾಹ್ನ ಪೇರಾಲು ಬಜಪ್ಪಿಲ ದೈವಸ್ಥಾನಕ್ಕೆ ತೆರಳಿ ಅಲ್ಲಿಂದ ದೈವಗಳ ಭಂಡಾರವನ್ನು ಮುಚ್ಚಿರಡಿ ದೈವಸ್ಥಾನಕ್ಕೆ ತರಲಾಯಿತು.
ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ಫೆ. 27ರಂದು ಬೆಳಿಗ್ಗೆ ಇರ್ವೆರು ಉಳ್ಳಾಗಲು ದೈವಗಳ ನೇಮ ನಡಾವಳಿ ನಡೆದು ಮಧ್ಯಾಹ್ನ ಶ್ರೀ ಮುಡಿ ಗಂಧ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರವನ್ನು ಬಜಪ್ಪಿಲ ದೈವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಮತ್ತೆ ಉಪದೈವಗಳ ಭಂಡಾರವನ್ನು ತರಲಾಯಿತು. ಫೆ. 28ರಂದು ಮುಚ್ಚಿರಡಿ ಉಳ್ಳಾಗಳ ದೈವಸ್ಥಾನದಲ್ಲಿ ಉಪದೈವಗಳ ಕೋಲ ಹಾಗೂ ನೇಮ ನಡಾವಳಿ ನಡೆಯಲಿದೆ.