Ad Widget

ಅಡ್ಯಡ್ಕ ಚಾಂಬಾಡು ರಸ್ತೆಯಲ್ಲಿ ಶಿಥಿಲಗೊಂಡ ಸೇತುವೆ – ಘನ ವಾಹನ ಸಂಚಾರ ನಿಷೇಧ!

. . . . . . . . .

ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಡಿಕಾನ ಗ್ರಾಮದ ಅಡ್ಯಡ್ಕ ಚಾಂಬಾಡು ರಸ್ತೆಯ ಅಡ್ಯಡ್ಕದಲ್ಲಿರುವ ಸೇತುವೆಯು ಶಿಥಿಲಗೊಂಡ ಕಾರಣ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಅರಂತೋಡು ಗ್ರಾಮ ಪಂಚಾಯಿತಿಯಿಂದ ಸೂಚನಾ ಫಲಕ ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ಇರುವ ಸೇತುವೆಯು ಶಿಥಿಲಗೊಂಡ ಬಗ್ಗೆ ಕಳೆದ ಎರಡು ವರ್ಷಗಳಿಂದಲೇ ದೂರುಗಳು ಬರುತ್ತಿದ್ದು ಈ ಕುರಿತು ತಾಂತ್ರಿಕ ಪರಿಶೀಲನೆಯನ್ನು ನಡೆಸಿದಾಗ ಸೇತುವೆ ಶಿಥಿಲಗೊಂಡಿರುವುದು ದೃಢಪಟ್ಟಿದೆ.

. . . . . . .

ತೊಡಿಕಾನ ಗ್ರಾಮದ ಅಡ್ಯಡ್ಕ ಚಾಂಬಾಡು ರಸ್ತೆಯಲ್ಲಿರುವ ಸೇತುವೆಯು ಶಿಥಿಲಾವಸ್ತೆ ತಲುಪಿದ್ದು ಅದರಲ್ಲಿ ಘನ ವಾಹನಗಳು ಸಂಚರಿಸುತ್ತಿವೆ ಎಂದು ಸ್ಥಳೀಯರು ಪಂಚಾಯಿತಿಗೆ ದೂರು ನೀಡಿರುವುದರಿಂದ ಗ್ರಾಮ ಪಂಚಾಯತ್ ಸೇತುವೆಯ ಗುಣಮಟ್ಟದ ಬಗ್ಗೆ ತಾಂತ್ರಿಕ ಸಲಹೆ ಪಡೆದು ಘನ ಘನವಾಹನಗಳ ಸಂಚಾರ ನಿಷೇಧಿಸಲು ಕ್ರಮ ಕೈಗೊಂಡಿರುತ್ತದೆ. ಇದರಲ್ಲಿ ಇತರ ತಾಲೂಕಿನ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿಯ ವಿಷಯದಲ್ಲಿ ಅಡ್ಡಿಪಡಿಸುವ ಉದ್ದೇಶ ಇಲ್ಲವೆಂದು ಅರಂತೋಡು ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ ಸ್ಪಷ್ಟಪಡಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading