ಕ್ರೀಡೆಯು ಶರೀರಸ್ಥಿತಿ ಮತ್ತು ಮನಸಿಕ ಸಮತೋಲನದ ಬೆಳವಣಿಗೆಗೆ ಅಗತ್ಯವಾದಅಂಶವಾಗಿದೆ.ಅದು ವೈಯಕ್ತಿಕ ಬದಲಾವಣೆಗೆ ಮತ್ತು
ಸಮಾಜ ಸುಧಾರಣೆಗೆ ಸಹಕಾರಿಯಾಗಿದೆ- ಡಾ. ಉಜ್ವಲ್‌ಯು.ಜೆ
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕಕ್ರೀಡಾಕೂಟ೨೩ನೇ ಫೆಬ್ರವರಿ೨೦೨೪ರಂದು ಕಾಲೇಜಿನಕ್ರೀಡಾಂಗಣದಲ್ಲಿ ನಡೆಯಿತು. ನಿವೃತ್ತದೈಹಿಕ ಶಿಕ್ಷಕರು ಹಾಗೂ ಸುಳ್ಯ ತಾಲೂಕಿನ ಲಗೋರಿಗೇಮ್ಸ್ನ ಮುಖ್ಯಸ್ಥರು ಶ್ರೀ ದೊಡ್ಡಣ್ಣ ಬರೆಮೇಲುಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳ ದಿಶೆಯಲ್ಲಿ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆಕ್ರೀಡೆಯ ಮಹತ್ವ ಬಹಳ ಹೆಚ್ಚಿನದ್ದು. ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರಕಾರದ ಉದ್ಯೋಗಾವಕಾಶ ಹೆಚ್ಚು ಎಂದು ನುಡಿದು ನೆರೆದ ಸರ್ವರಿಗೂ ಕ್ರೀಡಾಕೂಟಕ್ಕೆ ಶುಭ ಹಾರೈಸಿ ಎಲ್ಲರೂಕ್ರೀಡಾ ಮನೋಭಾವದಿಂದ ಇವತ್ತಿನ ದಿನವನ್ನು ಅನಂದಿಸಿ ಎಂದು ನುಡಿದರು.ಡಾ. ಉಜ್ವಲ್‌ಯು.ಜೆ., ವಿ.ಟಿ.ಯುಎಕ್ಸಿಕ್ಯುಟಿವ್‌ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್&ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥಇವರುಗೌರವಅತಿಥಿಯಾಗಿದ್ದರು.ಇವರು ಮಾತನಾಡಿಕ್ರೀಡೆಯಿಂದ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸಬಹುದಲ್ಲದೆ ದೈಹಿಕಆರೋಗ್ಯವನ್ನು ಹೆಚ್ಚಿಸಬಹುದುಎಂದು ವಿದ್ಯಾರ್ಥಿಗಳಿಗೆ ಕಲಿಕೆಯಜೊತೆಗೆಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಹುರಿದುಂಬಿಸಿದರು. ಕಾಲೇಜಿನ ಪ್ರಾಂಶುಪಾಲರಾದಡಾ.ಸುರೇಶ ವಿ.ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಮಾತನಾಡಿ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕೆ.ವಿ.ಜಿ. ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನದೈಹಿಕ ಶಿಕ್ಷಕರಾದ ಶ್ರೀ ತೀರ್ಥವರ್ಣತೀರ್ಪುಗಾರರಾಗಿ ಸಹಕರಿಸಿದರು.ಕ್ರೀಡಾಕೂಟದಲ್ಲಿಎನ್.ಎಸ್.ಎಸ್. ವತಿಯಿಂದತAಪಾದ ಪಾನೀಯ ವಿತರಣೆ ಮತ್ತು ಪ್ರಥಮಚಿಕಿತ್ಸೆಯ ಸೌಲಭ್ಯವನ್ನು ಒದಗಿಸಿದರು. ದೈಹಿಕಉಪನ್ಯಾಸಕರಾದ ಶ್ರೀ ಭಾಸ್ಕರ್‌ಎಸ್.ಬಿ., ಪ್ರೊ. ಅಜಿತ್ ಬಿ.ಟಿ.,ಎನ್.ಎಸ್. ಘಟಕಾಧಿಕಾರಿಡಾ. ಪ್ರಜ್ಞಎಂ.ಆರ್ ಮತ್ತು ವಿದ್ಯಾರ್ಥಿಕ್ಷೇಮಾಧಿಕಾರಿಯಾದ ಪ್ರೊ.ಲೋಕೇಶ್ ಪಿ.ಸಿ ಕ್ರೀಡಾಕೂಟದಕಾರ್ಯಕ್ರಮವನ್ನು ಸಂಯೋಜಿಸಿದರು. ಉಪ ಪ್ರಾಂಶುಪಾಲರಾದಡಾ. ಶ್ರೀಧರ್ ಕೆ, ಆಡಳಿತಾಧಿಕಾರಿ ಶ್ರೀ ನಾಗೇಶ್‌ಕೊಚ್ಚಿ, ಶ್ರೀ ಪ್ರಸನ್ನಕುಮಾರ್‌ಕಲ್ಲಾಜೆ, ಮಾಧವ ಬಿ.ಟಿ.,ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋದಕ, ಬೋದಕೇತರ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Thursday
- November 21st, 2024