ಎರೆಡೆರಡು ಬಾರಿ ಗುದ್ದಲಿಪೂಜೆ ಗೈದ ಸೇತುವೆಗೆ ಅನುದಾನವೇ ಇಲ್ಲಾ – ಚುನಾವಣಾ ಗಿಮಿಕ್ ಗೀತಾ ಕೋಲ್ಚಾರ್.
ಆಲೆಟ್ಟಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮದ ಪ್ರಥಮ ಪ್ರಜೆ ವೀಣಾಕುಮಾರಿ ಆಲೆಟ್ಟಿ ಇವರ ನೇತೃತ್ವದಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಗ್ರಾಮದ ಜನತೆ ನೀಡಿದ ಅರ್ಜಿಗಳನ್ನು ಓದಲಾಯಿತು. ಅರ್ಜಿಗಳ ಪೈಕಿ ಕುಡಿಯುವ ನೀರು , ಖಾತೆ ಬದಲಾವಣೆ , ಖಾತೆ ಸೃಷ್ಟಿ , ಪರವಾನಿಗೆ ಸೇರಿದಂತೆ ಇತರೆ ಅರ್ಜಿಗಳು ಇದ್ದವು ಅರ್ಜಿಗಳ ಪೈಕಿ ಮುಖ್ಯವಾಗಿ ಗ್ರಾಮ ಪಂಚಾಯತ್ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಮನವಿ ನೀಡಲಾಗಿತ್ತು ಅದರಂತೆ ಗ್ರಾಮ ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲಿ ಎಪ್ರಿಲ್ ಬಳಿಕ ಮಾಡುವುದಾಗಿ ತೀರ್ಮಾನಿಸಲಾಯಿತು . ಅಲ್ಲದೇ ಈಗಾಗಲೇ ಸಿಬ್ಬಂದಿಗಳಿಗೆ 18,540 ರೂಪಾಯಿ ನೀಡುತ್ತಿದ್ದು ಇದನ್ನು ಮತ್ತೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಮನವಿ ನೀಡಿದ್ದರು ಇವರ ಅರ್ಜಿಗಳಲ್ಲಿ ಸುಮಾರು 6 ಸಾವಿರ ರೂಪಾಯಿಗಳಷ್ಟು ಏರಿಕೆ ಮಾಡಲು ಆಗ್ರಹಿಸಿ ಮನವಿ ನೀಡಲಾಗಿತ್ತು ಈ ಹಿನ್ನಲೆಯಲ್ಲಿ ಏರಿಕೆ ಮಾಡುವ ಭರವಸೆಯನ್ನು ನೀಡಲಾಯಿತು . ಅಲ್ಲದೇ ಕಛೇರಿ ಕೆಲಸಗಳ ಮಾಹಿತಿ ಹೊರಕ್ಕೆ ಹೋಗುತ್ತಿದ್ದು ಇದನ್ನು ಸರಿ ಪಡಿಸಬೇಕು ಎಂದು ಆಗ್ರಹಿಸಿದರು ಧರ್ಮಪಾಲ ಕೊಯಿಂಗಾಜೆ ಹೇಳಿದರು ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ವೇತನ ಹೆಚ್ಚಳ ಮಾಡುತ್ತೆವೆ ಆದರೆ ಸಮಯ ಪಾಲನೆಯನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು .
ಎರೆಡೆರಡು ಬಾರಿ ಗುದ್ದಲಿಪೂಜೆ ಅನುದಾನದ ಕುರಿತು ಅಧಿಕೃತ ಮಾಹಿತಿ ಇಲ್ಲಾ ಯಾಕೆ ಗೀತಾ ಕೋಲ್ಚಾರ್.
ಏಣಾವರದ ಬಳಿಯಲ್ಲಿ ಇರುವ ಸೇತುವೆಯು ಶಿಥೀಲವಾಗಿದ್ದು ಮೂರು ವರ್ಷಗಳ ಹಿಂದೆ ಗುದ್ದಲಿ ಪೂಜೆ ನಡೆಸಲಾಗಿದೆ ಆದರು ಇಲ್ಲಿಯ ತನಕ ಅದು ಯಾಕೆ ಕಾಮಗಾರಿ ಆಗಿಲ್ಲ ಎಂದು ಗೀತಾ ಕೋಲ್ಚಾರ್ ಪ್ರಶ್ನಿಸಿದರು ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಮತನಾಡಿ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಖಾಸಗಿ ವ್ಯಕ್ತಿಯೋರ್ವರು ನನಗೆ ಕರೆ ಮಾಡಿ ಅನುದಾನ ಬಂದಿರುವುದಾಗಿ ತಿಳಿಸಿದ್ದಾರೆ ಅದು ಅಧಿಕೃತವಾಗಿ ಬಂದಿಲ್ಲ ಎಂದು ಸಭೆಯಲ್ಲಿ ಹೇಳಿದರು. 2021 ರಲ್ಲಿ ಸಲ್ಲಿಸಿದ ಅರ್ಜಿಗೆ ಇಲ್ಲಿಯ ತನಕ ಅನುದಾನ ಬಂದಿಲ್ಲಾ ಸೇತುವೆಯು ನಿರ್ಮಾಣವಾಗಿಲ್ಲಾ ಎಂದು ಜಿಲ್ಲಾ ಜನ ಸಂಪರ್ಕ ಸಭೆಯಲ್ಲಿ ನೀಡಿದ ಅರ್ಜಿಯ ಸಂಭಂದಿಸಿದ ಕಡತಗಳು ಪಂಚಾಯತ್ ಗೆ ಬಂದಿದೆ ಎಂದು ಹೇಳಿದರು . ಅಲ್ಲದೆ ಮುಂದಿನ ಸಾಲಿನಲ್ಲಿ ಪಂಚಾಯತ್ ಬಜೆಟ್ , ತೆರಿಗೆ ಸಂಗ್ರಹ ಸೇರಿದಂತೆ ಇಲಾಖೆಗಳ ಸುತ್ತೋಲೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ತ್ಯಾಜ್ಯ ನಿರ್ವಾಹಣೆ ಕುರಿತು ಚರ್ಚೆ.
ಗ್ರಾಮದಲ್ಲಿ ಸುಸಜ್ಜಿತ ಘನತ್ಯಾಜ್ಯ ಘಟಕ ಸ್ಥಾಪನೆಗೆ ಈಗಾಗಲೇ ಕಂದಾಯ ಇಲಾಖೆ ಭೂಮಿ ನೀಡಿದ್ದು ಅದನ್ನು ಜಂಟಿ ಸರ್ವೆ ಮೂಲಕ ಭದ್ರಪಡಿಸಬೇಕು ಎಂದು ಸರ್ವ ಸದಸ್ಯರು ಸಭೆಯಲ್ಲಿ ಆಗ್ರಹಿಸಿ ಜಂಟಿ ಸರ್ವೆಗೆ ತಾಹಶೀಲ್ದಾರ್ ಗೆ ಅರ್ಜಿ ಸಲ್ಲಿಸುವುದಾಗಿ ಸಬೆಯಲ್ಲಿ ಅಧ್ಯಕ್ಷರು ತಿಳಿಸಿದರು.
ಕುಡೆಂಬಿ ಮತ್ತು ಬಿಲ್ಲರಮಜಲು ಎಂಬಲ್ಲಿ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದ ಮನೆಗಳು ಇದ್ದು ಅವುಗಳನ್ನು ಕಾಲೋನಿಗಾಳಾಗಿ ಪರಿವರ್ತನೆ ಮಾಡಬೇಕು ಮತ್ತು ಆ ಏರಿಯಗಳನ್ನು ಅಭಿವೃದ್ದಿ ಪಡಿಸಬೇಕು ಎಂದು ಗೀತಾ ಕೋಲ್ಚಾರ್ ಸಭೆಯಲ್ಲಿ ಹೇಳಿದರು ಇದನ್ನು ಒಪ್ಪಿದ ಆಡಳಿತ ಮಂಡಳಿಯು ಸರ್ವಾನುಮತದಿಂದ ನೂತನ ಕಾಲನಿಗಳಾಗಿ ನಿರ್ಣಯ ಮಾಡಲಾಯಿತು . ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸೇರಿದಂತೆ 20 ಸದಸ್ಯರುಗಳು ಉಪಸ್ಥಿತರಿದ್ದರು.