Ad Widget

ಕಲ್ಲುಗುಂಡಿ: ಮಾನವೀಯತೆ ಮೆರೆದ ಯಶಸ್ವಿ ಯುವಕ ತಂಡ



ಕಲ್ಲುಗುಂಡಿಯಲ್ಲಿ ನಡೆದ ಕೆಪಿಎಲ್ 7 ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಫಿಯನ್ನು ಅಲಂಕರಿಸಿಕೊಂಡ ಸ್ಥಳೀಯ ಯಶಸ್ವಿ ಯುವಕ ತಂಡವು ಬಹುಮಾನದಲ್ಲಿ ಬಂದ ಮೊತ್ತವನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೀಡಿದ್ದಾರೆ. ಚೆಂಬು ಗ್ರಾಮದ ಆನ್ಯಾಳ ಅಜಿತ್ ಎಸ್ ಹಾಗೂ ಅನುಪಮಾ ದಂಪತಿಗಳ ಪುತ್ರಿ ಆರ್ವಿ (4ವರ್ಷ) ಪುಟ್ಟ ಮಗು ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಟ್ಟ ಮಗುವಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈಗಾಗಲೇ ಮಗುವಿಗೆ ಶಸ್ತ್ರ ಚಿಕಿತ್ಸೆಗೆ ಸುಮಾರು 5 ಲಕ್ಷ ರೂಪಾಯಿ ಅವಶ್ಯಕತೆ ಇದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕುಟುಂಬ ಮಗುವಿನ ಚಿಕಿತ್ಸೆಯ ವೆಚ್ಚಕ್ಕಾಗಿ ದಾನಿಗಳ ಸಹಕಾರವನ್ನು ಪಡೆಯುತ್ತಿದ್ದಾರೆ.

. . . . . . . . .



ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಮೊತ್ತವನ್ನು ಮಗುವಿನ ಚಿಕಿತ್ಸೆಗೆ ನೀಡಿ ಸಹಕರಿಸಿದ್ದಾರೆ. ಯುವಕ ಮಂಡಲದ ಸದಸ್ಯರ ಈ ಕಾರ್ಯ ವೈಖರಿ ಸ್ಥಳೀಯ ಜನತೆಯಿಂದ ಪ್ರಸಂಶೆಗೆ ಪಾತ್ರವಾಗಿದೆ. ಇನ್ನೂ ಕೂಡಾ ಚಿಕಿತ್ಸೆಗೆ ಈ ಬಡ ಕುಟುಂಬಕ್ಕೆ ಆರ್ಥಿಕ ನೆರವು ಬೇಕಾಗಿದ್ದು ದಾನಿಗಳು ಸಹಕರಿಸುವಂತೆ ಮನೆಯ ಸದಸ್ಯರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಅಜಿತ್ ಎಸ್ : ಮೊ : 9945924201

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading