ಬಾಳಿಗೆ ಬೆಳಕು ಲೋಕಾರ್ಪಣೆ
ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ದಿನಾಂಕ 25.02 2024 ರಂದು ಭಾನುವಾರ ಬೆಳಗ್ಗೆ ಸಮಯ 9.30ಕ್ಕೆ ಮನಿಷಾ ಸಭಾಂಗಣ ಜೈನ ಭವನ ರಸ್ತೆ ಪುತ್ತೂರು ಇಲ್ಲಿ ಯುವ ಕವಯಿತ್ರಿ ಪ್ರಿಯಾ ಸುಳ್ಯ ಇವರ ಎರಡನೇ ಕವನ ಸಂಕಲನ ಬಾಳಿಗೆ ಬೆಳಕು ಲೋಕಾರ್ಪಣೆ ಗೊಳ್ಳಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷರಾಗಿರುವ ಪುತ್ತೂರು ಉಮೇಶ್ ನಾಯಕ್ ಇವರು ವಹಿಸಿಕೊಳ್ಳಲಿದ್ದಾರೆ. ಸಾಹಿತಿಗಳು ವಿಮರ್ಶಕರು ನ್ಯಾಯವಾದಿಗಳಾಗಿರುವ ಭಾಸ್ಕರ್ ಕೋಡಿಂಬಾಳರವರು ಕಾರ್ಯಕ್ರಮ ಉದ್ಘಾಟಿಸಲಿರುವರು. ಸ. ಉ. ಹಿ. ಪ್ರಾ. ಶಾಲೆ ಪಡ್ನೂರು ಇಲ್ಲಿನ ವಿದ್ಯಾರ್ಥಿನಿ ಕು ಮಣಿ ಬಾಳಿಗೆ ಬೆಳಕು ಕೃತಿ ಲೋಕಾರ್ಪಣೆಗೊಳಿಸಲಿರುವರು. ಕೃತಿಕಾರರ ಪರಿಚಯವನ್ನು ಶ್ರೀಯುತ ರಾಜು ಪತ್ರಕರ್ತರು ಬೆಂಗಳೂರು ಇವರು ಮಾಡಲಿದ್ದಾರೆ. ಶ್ರೀಮತಿ ವಿಂಧ್ಯಾ.ಎಸ್. ರೈ ಇವರು ಕೃತಿ ಪರಿಚಯವನ್ನು ಮಾಡಲಿದ್ದಾರೆ. ಶ್ರೀ ನಾರಾಯಣ ರೈ ಕುಕ್ಕುವಳ್ಳಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಇವರು ಶುಭಾಶಂಸನೆ ಕೋರಲಿದ್ದಾರೆ. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ವಸಂತ್ ಶೆಟ್ಟಿ ಅಧ್ಯಕ್ಷರು ಕನ್ನಡ ದೆಹಲಿ ಸಂಘ ಇವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸುಂದರ ರೈ ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರು ಘಟಕ, ಶ್ರೀ ಸುಭಾಷ್ ಎಸ್ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು, ಶ್ರೀ ಚಂದ್ರ ಮೌಳಿ ಕಡಂದೇಲು ಸ್ಥಾಪಕಾಧ್ಯಕ್ಷರು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಉಪಸ್ಥಿತರಿರುವರು. ಪ್ರಿಯಾ ಸುಳ್ಯ ಇವರು ತಮ್ಮ ಸಾಹಿತ್ಯ ರಚನೆಯ ಸವಿ ನೆನಪುಗಳನ್ನು ಈ ಶುಭ ಸಂದರ್ಭದಲ್ಲಿ ಹಂಚಿಕೊಳ್ಳಲಿದ್ದಾರೆ. ಅಪೂರ್ವ ಕಾರಂತ್ ದರ್ಬೆ ಸ್ವಾಗತಿಸಲಿರುವರು. ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾದ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಶ್ರೀಮತಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ನಿರೂಪಣೆ ಮಾಡಲಿದ್ದಾರೆ. ದ. ಕ.ಜಿ. ಪಂ. ಹಿ. ಪ್ರಾ. ಶಾಲೆ ಚಿಕ್ಕ ಮುಡ್ನೂರು ಇಲ್ಲಿನ ವಿಶೇಷ ಚೇತನ ಪ್ರತಿಭೆ ಕು. ಧನ್ಯಶ್ರೀ ಪ್ರಾರ್ಥನೆ ಹಾಡಲಿದ್ದು,ಕಾರ್ಯಕ್ರಮದ ಧನ್ಯವಾದ ಸಮರ್ಪಣೆಯನ್ನು ಸುರೇಶ್ ಪಿ ನಿಯೋಜಿತ ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರು ಇವರು ನೆರವೇರಿಸಲಿದ್ದಾರೆ. ಈ ಕವನ ಸಂಕಲನದ ಕಾರ್ಯಕ್ರಮದಲ್ಲಿ ಸಾಹಿತ್ಯ ಆಸಕ್ತರು ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡು ಯಶಸ್ವಿಯಾಗಿಸಬೇಕೆಂದು ಸಂಘಟಕರ ಪರವಾಗಿ ಕವನ ಸಂಕಲನದ ಕವಯಿತ್ರಿ ಪ್ರಿಯಾ ಸುಳ್ಯ ವಿನಂತಿಸಿದ್ದಾರೆ.
- Sunday
- November 24th, 2024