ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಪಕ್ಷದ ಸಮಾವೇಶವು ಫೆ.೨೦ರಂದು ಉಡುಪಿ ಗಾರ್ಡನ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಕ್ಷದ ದ ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ನೆರವೇರಿಸಿದರು. ದಿಕ್ಸೂಚಿ ಭಾಷಣಗಾರರಾಗಿ ಸೋಶಿಯಲ್ ಡೆಮಾಕ್ರೆಟಿ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದಾಗಿ ದೇಶ ಪತನದ ಕಡೆಗೆ ಹೋಗುತ್ತಿದೆ. ದೇಶದಲ್ಲಿ ಪ್ರಸ್ತುತ ಸಂದರ್ಭದಲ್ಲಿ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ವೈಫಲ್ಯಗಳ ಬಗ್ಗೆ, ಕಾನೂನುಗಳ ಬಗ್ಗೆ ಚರ್ಚೆಗಳನ್ನು ನಡೆಸಲು ಆರಂಭಿಸಿದೆ. ನಮ್ಮ ಪಕ್ಷದ ಸಿದ್ಧಾಂತ ಸರ್ವರಿಗೂ ಸಮಪಾಲು ಸಮ ಬಾಳು. ಕಳೆದ ೧೪ ವರ್ಷಗಳಿಂದ ನಮ್ಮ ಪಕ್ಷವು ರಾಜಕೀಯವಾಗಿ ಅನ್ಯಾಯ ಮಾಡುವ ಕೈಗಳನ್ನು ತಡೆಯುವ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಕ್ಟರ್ ಮಾರ್ಟಿಸ್ ಉಪಾಧ್ಯಕ್ಷರು ಎಸ್‌ಡಿಪಿಐ ದ.ಕ ಜಿಲ್ಲೆ, ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರುಗಳಾದ ಬಾಬು ಎನ್ ಸವಣೂರು,ಅಬ್ದುಲ್ ಕಲಾಂ ಸುಳ್ಯ, ಕಾರ್ಯದರ್ಶಿ ಶರೀಫ್ ನಿಂತಿಕಲ್, ಕೋಶಾಧಿಕಾರಿ ಅಬ್ದುಲ್ ರಹಮಾನ್ ತಂಬಿನಮಕ್ಕಿ, ಮುಖಂಡರುಗಳಾದ ರಮ್ಲಾನ್ ಸನ್‌ರೈಸ್ ಕಡಬ, ಮಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಮಲ್ಲೂರು, ಸವಣೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ರಫೀಕ್ ಎಂ ಎ,ಸಬೀನ,ಮಾಜಿ ಸದಸ್ಯರಾದ ಮೀನಾಕ್ಷಿ, ಕೊಯಿಲ ಗ್ರಾಮ ಪಂಚಾಯತಿ ಸದಸ್ಯ ಸಬಿಯಾ, ರಾಮ ಕುಂಜ ಗ್ರಾಮ ಪಂಚಾಯತಿ ಸದಸ್ಯ ಚೆನ್ನು, ಬೆಳ್ಳಾರೆ ಗ್ರಾಮ ಪಂಚಾಯತಿ ಸದಸ್ಯ ನಸೀಮಾ ಹಾರಿಸ್, ವಿಧಾನಸಭಾ ಕ್ಷೇತ್ರ ಸಮಿತಿಯ ಜೊತೆ ಅಶ್ರಫ್ ಟರ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ ನಿರೂಪಿಸಿದರು. ಕಾರ್ಯದರ್ಶಿ ಶರೀಫ್ ನಿಂತಿಕಲ್ಲು ವಂದಿಸಿದರು.
- Thursday
- November 21st, 2024