
ತಾಲೂಕು ಕಚೇರಿ ಎದುರು ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮನವಿ ಸಂಘಟನೆಗಳಿಂದ ಮನವಿ, ನಿರ್ಮಿಸುವ ಭರವಸೆ.
ಭಾರತ ದೇಶದ ಸತ್ಪ್ರಜೆಯಾಗಿ ಬಾಳುವವನಿಗೆ ಸಂವಿಧಾನ ಬೇಕು. ಪ್ರತೀ ಜಾತಿ, ಧರ್ಮ ಗಳಿಗೆ ಆದರದೇ ಆದ ಗ್ರಂಥಗಳಿದ್ದರೆ, ಈ ದೇಶದ ಎಲ್ಲವರು ಜತೆಯಾಗಿ ಬಾಳಲು ಕಾರಣವಾಗಿರುವ ಸಂವಿಧಾನ ದೇಶದ ದೊಡ್ಡಗ್ರಂಥ. ಅದನ್ನು ಕಾಪಾಡುವ ಹೊಣೆಗಾರಿಕೆಯೊಂದಿಗೆ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಯು ನಡೆಯಬೇಕು ಎಂದು ನ್ಯಾಯವಾದಿ, ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಫೆ.20ರಂದು ಕಂದಾಯ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಳ್ಯ ಕೆ.ವಿ.ಜಿ. ಪುರಭವನದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತ ಅಸ್ಪ್ರಶ್ಯತೆ, ಅಸಮಾನತೆ, ಸ್ತ್ರೀ ಶೋಷಣೆ ಈ ದೇಶದಲ್ಲಿತ್ತು. ಸಂವಿಧಾನ ಬಂದ ಬಳಿಕ ಕನಸು ಕಾಣುವ ಮತ್ತು ಅದನ್ನು ಗುರಿ ತಲುಪಲು ಎಲ್ಲರಿಗೂ ಸಾಧ್ಯವಾಯಿತು. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ವಿವಿಧತೆಗಳನ್ನು ಇಂದಿಗೂ ಉಳಿಸಿಕೊಟ್ಟಿರುವುದು ಸಂವಿಧಾನ ಎಂದು ಅವರು ಹೆಳಿದರು. ನಾವು ಭಾರತೀಯರು ಸಂವಿಧಾನದ ಆಶಯದಡಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು. ಅಲ್ಲದೆ ಇಂದು ಓರ್ವ ಅಧಿಕಾರಿ ಅಥವಾ ರಾಜಕೀಯ ನಾಯಕರುಗಳಿಗೆ ನೇರ ಪ್ರಶ್ನೆಗಳನ್ನು ಕೇಳುವ ಮತ್ತು ಎದುರಿಸುವ ಧೈರ್ಯ ಪ್ರತಿಯೊಬ್ಬನಿಗು ಬರಲು ಕಾರಣ ಸಂವಿಧಾನ ಎಂದು ಅವರು ಹೇಳಿದರು. ಅಲ್ಲದೇ ಈ ದೇಶದಲ್ಲಿ ಅಂಬೆಡ್ಕರ್ ರಚಿಸಿದ ಸಂವಿಧಾನದಿಂದಾಗಿ ಸಾಮಾನ್ಯ ಓರ್ವ ವ್ಯಕ್ತಿಯು ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಲು ಮತ್ತು ಮಹಿಳೆಯರು ಇದೀಗ ಸಮಾಜದ ಪ್ರಮುಖವಾದ ಸ್ಥಾನಮಾನ ಅಲಂಕರಿಸಲು ಸಂವಿಧಾನ ಕಾರಣವಾಗಿದೆ ಅಲ್ಲದೆ ವಿಧ್ಯಾರ್ಥಿಗಳು ಮತ್ತು ಯುವ ಜನತೆ ಸಾಮಾಜಿಕ ಜಾಲತಾಣಗಳ ಸಂವಿಧಾನ ಓದದೆ ನೈಜವಾದ ಅಂಬೆಡ್ಕರ್ ರಚಿಸಿದ ಸಂವಿಧಾನವನ್ನು ಓದುವ ಮೂಲಕ ಸಂವಿಧಾನವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಸುಳ್ಯ ತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮತನಾಡುತ್ತಾ ತಾಲೂಕು ಕಛೇರಿಯ ಬಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ತಳಿ ನಿರ್ಮಾಣಕ್ಕೆ ಪೂರಕ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಅಲ್ಲದೇ ಅಂಬೆಡ್ಕರ್ ಭವನವನ್ನು ಶೀಗ್ರವಾಗಿ ನಿರ್ಮಿಸಲು ಕ್ರಮ ವಹಿಸುವುದಾಗಿ ಹೇಳಿದರು. ಅಲ್ಲದೇ ಡಾ.ಬಿ.ಆರ್.ಅಂಬೇಡ್ಕರ್ ರ ಭಾವಚಿತ್ರಕ್ಕೆ ಹಾರಾರ್ಪಣೆಗೈದು, ಸಂವಿಧಾನ ಪೀಠಿಕೆ ವಾಚಿಸಿದರು.

ಸುಳ್ಯ ತಾಲೂಕು ಇ.ಒ. ಪರಮೇಶ್, ಸಮಾಜಕಲ್ಯಾಣ ಅಧಿಕಾರಿ ಮೋಹನ್ ಕುಮಾರ್, ಕಾರ್ಮಿಕ ಮುಖಂಡ ಕೆ.ಪಿ.ಜಾನಿ, ನ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ.ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಸದಸ್ಯ ಕೆ.ಎಸ್. ಉಮ್ಮರ್, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಎಸ್.ಐ. ಈರಯ್ಯ ದೂಂತೂರು, ದಲಿತ ಸಂಘಟನೆಗಳ ಜಿಲ್ಲಾ ಮುಖಂಡ ಆನಂದ ಬೆಳ್ಳಾರೆ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ಸಂವಿಧಾನದ ಆಶಯದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಕೆಡಿಪಿ ಸದಸ್ಯೆ ಸುಜಯ ಕೃಷ್ಣ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಬುದ್ಧ ನಾಯ್ಕ, ಶರೀಫ್ ಕಂಠಿ, ಧೀರಾ ಕ್ರಾಸ್ತ, ಪ್ರವಿತಾ ಪ್ರಶಾಂತ್, ಶಿಲ್ಪಾ ಸುದೇವ್, ಶಶಿಕಲಾ ನೀರಬಿದಿರೆ, ಸುಶೀಲ ಕಲ್ಲುಮುಟ್ಲು, ಶೀಲಾ ಕುರುಂಜಿ, ಕೃಷಿ ಸಹಾಯಕ ನಿರ್ದೇಶಕ ಗುರುಪ್ರಸಾದ್, ಎ.ಎ.ಪಿ.ಯ ಸುಮನಾ ಬೆಳ್ಳಾರ್ಕರ್ ಉಪಸ್ಥಿತರಿದ್ದರು.
ಅಂಬೇಡ್ಕರ್ ಪ್ರತಿಮೆ : ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿ ಕಾರ್ಮಿಕ ಮುಖಂಡ ಕೆ.ಪಿ. ಜಾನಿ ನೇತೃತ್ವದಲ್ಲಿ ತಹಶೀಲ್ದಾರ್ ರಿಗೆ ಮನವಿ ಮಾಡಲಾಯಿತು.
ಚಿಂತಕ ಲಕ್ಷ್ಮೀಶ್ ಗಬಲಡ್ಕ ಪ್ರಾಸ್ತಾವಿಕ ಮಾತನಾಡಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಹೆಚ್. ಸ್ವಾಗತಿಸಿದರು. ಅಶ್ರಫ್ ವಂದಿಸಿದರು. ಲೂಕಾಸ್ ಟಿ.ಐ. ಕಾರ್ಯಕ್ರಮ ನಿರೂಪಿಸಿದರು.