Ad Widget

ಸುಳ್ಯ ಮೆಸ್ಕಾಂ ಜನ ಸಂಪರ್ಕ ಸಭೆ , ರಸ್ತೆ , ಶಾಲೆಗಳ ಬಳಿಯಲ್ಲಿ ಜೋತು ಬಿದ್ದಿರುವ ತಂತಿಗಳ ಸರಿ ಪಡಿಸಲು ಆಗ್ರಹ.

ಸುಳ್ಯ: ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪ ವಿಭಾಗ‌ ಮಟ್ಟದ ಜನ ಸಂಪರ್ಕ ಸಭೆ ಸುಳ್ಯದ ಮೆಸ್ಕಾಂ ಉಪ ವಿಭಾಗದ ಸುಳ್ಯ ಕಛೇರಿಯಲ್ಲಿ ನಡೆಯಿತು. ಮೆಸ್ಕಾಂ‌ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಗ್ರಾಹಕರ‌ ಅಹವಾಲಯ ಆಲಿಸಿದರು. ವಿವಿಧ ಸಮಸ್ಯೆಗಳನ್ನು ಗ್ರಾಹಕರು ಮಂಡಿಸಿದರು.ತಾಲೂಕಿನ ನಾನಾ ಭಾಗಗಳಲ್ಲಿ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಬೇಕು,ಹೆಚ್ಚುವರಿ ಪರಿವರ್ತಕ ಅಳವಡಿಸಬೇಕು ಎಂದು ಗ್ರಾಹಕರು ಅಧಿಕಾರಿಗಳ ಮುಂದೆ ಬೇಡಿಕೆಯಿಟ್ಟರು. ಲೋ ವಾಲ್ಟೆಜ್ ಸಮಸ್ಯೆಗಳನ್ನು ಅನುಭವಿಸುತ್ತಿರುವ ಅಜ್ಜಾವರ, ಪಂಜ,‌ ಮಂಡೆಕೋಲು, ಮರ್ಕಂಜಗಳಲ್ಲಿ , ಆಲೆಟ್ಟಿಗಳಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಗುತ್ತಿದ್ದಂತೆ ಈ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಲಜೀವನ್ ಮಿಷನ್‌ನಡಿ ಕಾಮಗಾರಿ ಆದರೂ ಟಿಸಿ ಅಳವಡಿಕೆ ಆಗದ ಹಲವು ಸ್ಥಾವರಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕೊಡಲು ಆಗ್ತಾ‌ ಇಲ್ಲಾ. ತಾಲೂಕಿನ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ಇದೆ ಎಂದು ಅಮರ ಮುಡ್ನೂರು ಗ್ರಾ.ಪಂ.ಸದಸ್ಯ ಅಶೋಕ್ ಚೂಂತಾರು ಮತನಾಡುತ್ತಾ ನಮ್ಮ ಗ್ರಾಮದಲ್ಲಿ ಓರ್ವರಿಗೆ ಕೃಷಿ ಪಂಪುಸೆಟ್ಟ್ ಗಳಿಗೆ ಸಂಪರ್ಕ ನೀಡಿದ ಬಳಿಕ ಅದನ್ನು ದೂರು ಬಂದ ಹಿನ್ನಲೆಯಲ್ಲಿ ಕಡಿತ ಗೊಳಿಸಲಾಯಿತು ಈ ಹಿನ್ನಲೆಯಲ್ಲಿ ಓರ್ವರು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಅಲ್ಲದೆ ಕಾನೂನು ಎಲ್ಲರಿಗು ಒಂದೇ ಅಲ್ಲವೇ ಗ್ರಾಮ ಪಂಚಾಯತ್ ಬೋರ್ ಗಳ ಬಳಿಯಲ್ಲಿ ಕೃಷಿಕರ ಪಂಪುಗಳಿಗೆ ನೀಡುತ್ತಿರ ಆದರೆ ಮೃತಪಟ್ಟ ಆ ವ್ಯಕ್ತಿಯ ಸಂಪರ್ಕ ಮಾತ್ರ ಕಡಿತಗೊಳಿಸಿದ್ದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು ಅಲ್ಲದೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ಜಲಜೀವನ್ ಮಿಷನ್‌ನ ಎಲ್ಲಾ‌ ಕಾಮಗಾರಿಗಳನ್ನು ಮಾಡುತ್ತಾರೆ. ಒಂದು ವಾರದಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದಾರೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.

. . . . . .

ಸಂಪಾಜೆಯ 33 ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯ ಪ್ರಗತಿಯ ಬಗ್ಗೆ ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಹನೀಫ ಸಭೆಯ ಗಮನ ಸೆಳೆದರು. ಗೂನಡ್ಕ ಶಾಲೆಯ ಬಳಿ ಹೆಚ್‌ಟಿ ಲೈನ್ ಬದಲಿಸುವ ಬಗ್ಗೆ ಅವರು ಆಗ್ರಹಿಸಿದರು.ಆಲೆಟ್ಟಿ ಗ್ರಾಮದ ಮಾಣಿಮರ್ದುವಿನಲ್ಲಿ ಎಂಟು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕೈಗೊಂಡ ಕ್ರಮಗಳ ಬಗ್ಗೆ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಕೇಳಿದರು ಆಗ ಅಧಿಕಾರಿಗಳು ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮೆಸ್ಕಾಂ ಇಂಜಿನಿಯರ್‌ಗಳು ತಿಳಿಸಿದರು. ಅಲ್ಲದೆ ರಾಧಾಕೃಷ್ಣ ಪರಿವಾರಕಾನ ಮಾತನಾಡುತ್ತಾ ಜನಸಂಪರ್ಕ ಸಭೆಯಲ್ಲಿ ನೀಡಿದ ಅರ್ಜಿಗಳು ಎಲ್ಲಿಯ ತನಕ ಬಂದಿದೆ ಅವುಗಳ ಸ್ಥಿತಿಗತಿಗಳ ಬಗ್ಗೆ ಕೇಳಿದರಲ್ಲದೆ ಗಾಂಧಿನಗರ ಮತ್ತು ಇತರ ಕಡೆಗಳಲ್ಲಿ ರಸ್ತೆಯಲ್ಲಿ ವಿಧ್ಯುತ್ ತಂತಿಗಳು ಜೊತು ಬಿದ್ದಿದ್ದು ಅವುಗಳು ಬೃಹತ್ ಆಕಾರದ ವಾಹನಗಳಿಗೆ ತಾಗಿ ಅಪಾಯಗಳು ಆಗಬಹುದು ಅದನ್ನು ಕೂಡಲೇ ಸರಿ ಪಡಿಸಬೇಕು ಎಂದು ಆಗ್ರಹಿಸಿದರು .
ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಹಕರು ಗಮನ ಸೆಳೆದರು.

ಅಜ್ಜಾವರ ಪೇಟೆಗೆ ಪರಿವರ್ತಕ ಅಳವಡಿಕೆಗೆ ಆಗ್ರಹ.
ಅಜ್ಜಾವರ ಪೇಟೆ ಮತ್ತು ಶಾಲೆಯ ಮೈದಾನದಲ್ಲಿ ವಿಧ್ಯುತ್ ತಂತಿಗಳು ಹಾದು ಹೋಗಿದ್ದು ಇವುಗಳನ್ನು ತೆರವುಗೊಳಿಸಬೇಕು ಅಲ್ಲದೆ ಅಜ್ಜಾವರ ಪೇಟೆಗೆ ಪ್ರತ್ಯೇಕ ಪರಿವರ್ತಕ ಅಳವಡಿಕೆ ಮಾಡಬೇಕು ಎಂದು ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಅಜ್ಜಾವರ ಆಗ್ರಹಿಸಿದರು

ಈ ಸಂದರ್ಭದಲ್ಲಿ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ‌‌ ಕಾರ್ಯನಿರ್ವಾಹಕ ಇಂಜಿನಿಯರ್ ಚಿದಾನಂದ, ಸಹಾಯಕ ಇಂಜಿನಿಯರ್ ಸುಪ್ರೀತ್, ಹರಿಕೃಷ್ಣ, ಕಿರಿಯ ಇಂಜಿನಿಯರ್‌ಗಳಾದ ಲೋಕೇಶ್, ಮನಮೋಹನ, ಅಭಿಷೇಕ್ , ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!