
ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ಫೆ.20 ರಂದು ಬೆಳಿಗ್ಗೆ 9:00 ಗಂಟೆಯಿಂದ ಹಸಿರು ಕಾಣಿಕೆ ಪ್ರಾರಂಭ, ಮಧ್ಯಾನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ 8:00 ಗಂಟೆಗೆ ಮಹಾಪೂಜೆ, ರಾತ್ರಿ 8:15 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6:00 ರಿಂದ 7:00 ರವರೆಗೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ರಾತ್ರಿ 7:00 ರಿಂದ 8:00 ರವರೆಗೆ ಶ್ರೀ ಲಕ್ಷ್ಮಣ ಆಚಾರ್ಯ ಇವರ ಸಾರಥ್ಯದಲ್ಲಿ ಸ.ಕಿ.ಪ್ರಾ ಶಾಲೆ ಕರಂಗಲ್ಲು ಇಲ್ಲಿನ ವಿದ್ಯಾರ್ಥಿಗಳಿಂದ ಏಕಾದಶಿ ಮಹಾತ್ಮೆ, 8:00 ರಿಂದ 9:00 ರವರೆಗೆ ದೇವಾಲಯ ಸಂವರ್ಧನಾ ಸಮಿತಿ ಬೆಂಗಳೂರು ಕರ್ನಾಟಕ ರಾಜ್ಯ ಇದರ ಸಂಯೋಜಕರಾದ ಮನೋಹರ್ ಮಠದ್ ಇವರಿಂದ “ಗುಡಿ-ಜನರ ಜೀವನಾಡಿ” ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 9:00 ರಿಂದ 10:00 ರವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಂದ “ವಿವಿಧ ವಿನೋದಾವಳಿಗಳು”, 10:00 ರಿಂದ 10:45 ರವರೆಗೆ ಅಕ್ಷರಗಾನ ಸುಧೆ ತಂಡ ಕುಕ್ಕೆ ಸುಬ್ರಹ್ಮಣ್ಯ ಇವರಿಂದ “ಸಂಗೀತ ರಸಮಂಜರಿ” ಹಾಗೂ 10:45 ರಿಂದ 11:45 ರವರೆಗೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ(ರಿ.) ಕಾಸರಗೋಡು ಇವರಿಂದ “ನರಕಾಸುರ ವಧೆ-ಗರುಡ ಗರ್ವಭಂಗ” ಯಕ್ಷಗಾನ ಗೊಂಬೆಯಾಟ ನಡೆಯಲಿದ್ದು, 11:45 ರಿಂದ 12:30 ರವರೆಗೆ ವಿವಿಧ ಸಂಘ-ಸಂಸ್ಥೆಗಳಿಂದ “ಸಾಂಸ್ಕೃತಿಕ ಕಾರ್ಯಕ್ರಮಗಳು” ನಡೆಯಲಿವೆ.
ಫೆ.21 ರಂದು ಬೆಳಿಗ್ಗೆ 6:00 ಗಂಟೆಯಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ 12:00 ಗಂಟೆಯಿಂದ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 6:00 ಗಂಟೆಗೆ ದೀಪಾರಾಧನೆ, ಚೆಂಡೆವಾದನ, ರಾತ್ರಿ 8:00 ಗಂಟೆಗೆ ಮಹಾಪೂಜೆ, ರಾತ್ರಿ 8:00 ರಿಂದ ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ. ಜೊತೆಗೆ ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ರಿಂದ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ. ಸಂಜೆ 6:00 ರಿಂದ 7:00 ರವರೆಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಇವರಿಂದ ಶ್ರೀ ಸತ್ಯನಾರಾಯಣ ಸತ್ಯಕಥೆ ರೂಪಕ ನಡೆಯಲಿದೆ.
ಫೆ.22 ರಂದು ಬೆಳಿಗ್ಗೆ 6:00 ಗಂಟೆಯಿಂದ ಸಾಯಂಕಾಲದ ತನಕ ಉಳ್ಳಾಗುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)