Ad Widget

ಸುಬ್ರಹ್ಮಣ್ಯದ ಸ್ಥಾನಘಟ್ಟದ ಸುತ್ತಮುತ್ತ ಸ್ವಚ್ಛತಾ ಅಭಿಯಾನ

    ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸ್ಥಾನಘಟ್ಟದ ಸುತ್ತಮುತ್ತ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟ್ಲಿಗಳು, ಚೀಲಗಳು, ಕೊಳಚೆಗಳು, ಇನ್ನಿತರ ತ್ಯಾಜ್ಯಗಳನ್ನ ಭಕ್ತಾದಿಗಳು ಎಸೆದಿದ್ದು ಇಡೀ ಪರಿಸರವೇ ಮಾಲಿನ್ಯಗೊಂಡಿತು. ಇದನ್ನು ಕಂಡ ರವಿ ಕಕ್ಕೆ ಪದವು ಸಮಾಜ ಸೇವಾ  ಟ್ರಸ್ಟ್ ನವರು ಡಾl ರವಿ ಕಕ್ಕೆ ಪದವು ಅವರ ನೇತೃತ್ವದಲ್ಲಿ ಇಂದು ರವಿವಾರ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿದ್ದರು. ಇದಲ್ಲದೆ ಪಕ್ಕದ ಸಣ್ಣಪುಟ್ಟ ಹೋಟೆಲ್ ಗಳಿಂದ ತ್ಯಾಜ್ಯಗಳನ್ನ ತಂದು ಮರದ ಬುಡ ಹಾಗೂ ಇನ್ನಿತರ ಕಡೆಗಳಲ್ಲಿ ತ್ಯಾಜ್ಯಗಳನ್ನ ಹಾಕಿ ಪರಿಸರವನ್ನು ಮಲಿನಗೊಳಿಸಿದ್ದ ಅವರಿಗೆ ಡಾlರವಿ ಪದವು ಅವರು ಎಚ್ಚರಿಕೆಯನ್ನು ಕೂಡ ಈ ಸಂದರ್ಭದಲ್ಲಿ ನೀಡಿರುತ್ತಾರೆ.

. . . . . . .

ಇಡೀ ಪರಿಸರವನ್ನು ಎಷ್ಟು ಸ್ವಚ್ಛಗೊಳಿಸಿದರು ಮತ್ತೆರಡು ದಿನಗಳಲ್ಲಿ ಅಷ್ಟೇ ಕಸ ತುಂಬುವುದನ್ನು ಕಂಡ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಮುಂದೆ ಜಾಗೃತಿಗಾಗಿ ಬಿತ್ತಿ ಪತ್ರ ಮತ್ತು ಕರ ಪತ್ರಗಳನ್ನ ಹಂಚುವ ಯೋಜನೆಯನ್ನು ಹಾಕಿಕೊಂಡಿರುವರು.                    

ಇದಲ್ಲದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದವರು ಪ್ರತಿದಿನ ಇಬ್ಬರು ನೌಕರರನ್ನು ಸ್ವಚ್ಛತೆಗಾಗಿ ನೇಮಿಸಬೇಕೆಂದು ಅಗ್ರಹಿಸಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!