ಕರ್ನಾಟಕ ಸರಕಾರ 2018ರ ಸಹಕಾರಿ ಸಂಘ ಸೊಸೈಟಿ ಬ್ಯಾಂಕ್ ಇತ್ಯಾದಿ ಗಳಿಂದ ಸಾಲ ಮನ್ನಾ ಪರಿಹಾರದ ಮೊಬಲಗು ದೊರಕದ ರೈತರ ಪರವಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಘಟನೆಯು ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಪುತ್ತೂರು ಕಂದಾಯ ಉಪ ವಿಭಾಗ ಕಚೇರಿ ಎದುರುಗಡೆ ಫೆ .20ರಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಶಿರಾಡಿ ಬುಧವಾರ ಸುಬ್ರಹ್ಮಣ್ಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇವತ್ತು ಆಧುನಿಕ ತಂತ್ರಜ್ಞಾನ ಇಷ್ಟು ಮುಂದುವರಿದರು ಸರಕಾರದ ಸಾಲ ಮನ್ನಾ ಯೋಜನೆಗಳು ಮತ್ತು ಇನ್ನಿತರ ಯೋಜನೆಗಳು ಅರ್ಹತೆ ಇರುವ ರೈತರಿಗೆ ಸಿಗದಿರುವುದು ಈ ರಾಜ್ಯದ ರೈತರ ವಿಪರ್ಯಾಸ . ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ಗಳ ವಿರುದ್ಧ ಮತ್ತು ಸಾಲ ಮನ್ನಾ ವಂಚಿತ ರೈತರಿಗೆ ಸಾಲಮನ್ನಾದ ಒಂದು ಲಕ್ಷ ರೂ ಹಣ ಸಿಗದಿರುವ ಸಿಗುವ ತನಕ ಈ ಹೋರಾಟ ಮುಂದುವರೆಯಲಿದೆ ಎಂದು ಕಿಶೋರ್ ಶಿರಾಡಿ ಅವರು ಹೇಳಿದರು ಪ್ರತಿಭಟನೆ ದಿನ ಸಂಬಂಧಪಟ್ಟ ಡಿಸಿ ಬ್ಯಾಂಕಿನ ಅಧ್ಯಕ್ಷರು ನಿರ್ದೇಶಕರು ಹಾಗೂ ಬ್ಯಾಂಕಿನ ಅಧಿಕಾರಿಗಳು ನಮ್ಮ ಮನವಿ ಸ್ವೀಕರಿಸಲು ಸ್ಥಳಕ್ಕೆ ಬರಬೇಕು ಹಾಗೂ ರೈತರಿಗೆ ಸಿಗಬೇಕಾದ ಹಣ ಎಲ್ಲಿದೆ, ಯಾಕಾಗಿ ಹೀಗಾಗಿದೆ ಎಂಬುದರ ಬಗ್ಗೆ ಉತ್ತರ ನೀಡಬೇಕು ಎಂದು ಅವರು ಅಗ್ರಹಿಸಿದರು. ಅಲ್ಲದೆ ಸಾಲ ಮನ್ನಾ ಯೋಜನೆ ಆರಂಭವಾಗಿ ಆರು ವರ್ಷ ಆಗಿದೆ ,ರೈತರು ಇಲ್ಲಿಯವರೆಗೆ ಕಾದು ಕಾದು ಕಂಗಲಾಗಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕ ಜಯಪ್ರಕಾಶ್ ಕೂಜುಗೋಡು, ಸದಸ್ಯರುಗಳಾದ ಮೋಹನ ಕೆದಿಲ, ರಮೇಶ್ ಎಂ. ಎಸ್, ಹೂವಯ್ಯ ಕಲ್ಲೇರಿ ,ಪ್ರವೀಣ ಕೋನಡ್ಕ, ಎಂ ಮುತ್ತಪ್ಪ ಗೌಡ, ಡಿ ಲಿಂಗಪ್ಪಗೌಡ, ನರೇಂದ್ರ ಕೂಜುಗೋಡು ಹಾಗೂ ಲೋಕೇಶ್ ಕೋನಡ್ಕ ಉಪಸ್ಥಿತರಿದ್ದರು.
- Thursday
- November 21st, 2024