ಬೆಳ್ಳಿ ಹಬ್ಬ ಆಚರಣೆ ಸಂದರ್ಭ 25 ಶಾಖೆಗಳ ಗುರಿ : ಅಧ್ಯಕ್ಷ ಪಿ.ಸಿ.ಜಯರಾಮ್
ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಕೊಡಿಯಾಲಬೈಲು ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗಳ ಶಾಲಾ ೨ ಕೊಠಡಿಗಳಿಗೆ ಗುದ್ದಲಿಪೂಜೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಇತರೆ ಸಹಕಾರಿ ಸಂಘಗಳು, ಶ್ರೀ ವೆಂಕಟರಮಣ ಸೊಸೈಟಿಯ ಸದಸ್ಯರಿಗೆ, ಆಡಳಿತ ಮಂಡಳಿ – ಸಲಹಾ ಸಮಿತಿ ಹಾಗೂ ಸಿಬ್ಬಂದಿಗಳ ಕ್ರೀಡಾ ಸಮ್ಮಿಲನ ಫೆ.೨೪ರಂ.ದು ಕೊಡಿಯಾಲಬೈಲು ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಪಿ.ಸಿ. ಜಯರಾಮರು ಹೇಳಿದರು.
ಫೆ.೧೬ರಂದು ಸೊಸೈಟಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಕರೆದು ಅವರು ಕಾರ್ಯಕ್ರಮದ ವಿವರ ನೀಡಿದರು.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಈ ಸಹಕಾರಿ ಸಂಸ್ಥೆಯು ಗೌಡರ ಯುವ ಸೇವಾ ಸಂಘ ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟು, ೧೯೯೮ ರಲ್ಲಿ ಪ್ರಾರಂಭವಾದ ಸಹಕಾರಿ’ ಸಂಸ್ಥೆಯಾಗಿದ್ದು, ಸುಳ್ಯದಲ್ಲಿ ಪ್ರಾರಂಭವಾದ ಈ ಸಹಕಾರಿಯು ಪ್ರಸ್ತುತ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಒಟ್ಟು ೨೩ ಶಾಖೆಗಳನ್ನು ತೆರೆದು ಕಾರ್ಯನಿರ್ವಹಿಸುತ್ತಿದೆ. ಬೆಳ್ಳಿ ಹಬ್ಬದ ಸಂದರ್ಭ ೨೫ ಶಾಖೆಯನ್ನು ಆರಂಭ ಮಾಡಲಾಗುವುದು. ಸಂಘವು ಪ್ರಾರಂಭದಲ್ಲಿ ಕೇವಲ ೪೩೦ ಸದಸ್ಯರಿಂದ, ರೂ ೫,೯೫,೦೦೦.೦೦ ಪಾಲು ಬಂಡವಾಳದಿಂದ ಆರಂಭಗೊಂಡ ಈ ಸಹಕಾರಿಯು ಪ್ರಸ್ತುತ ೧೯೦೦೦ ಕ್ಕೂ ಮಿಕ್ಕಿ ಸದಸ್ಯರು, ರೂ ೪.೭೫ ಕೋಟಿ ಪಾಲು ಬಂಡವಾಳ, ರೂ ೧೯೨ ಕೋಟಿ ಠೇವಣಿ ಹಾಗೂ ಸದಸ್ಯರಿಗೆ ವಿವಿಧ ರೂಪದಲ್ಲಿ ರೂ. ೧೮೨ ಕೋಟಿಗೂ ಮಿಕ್ಕಿ ಸಾಲಗಳನ್ನು ವಿತರಿಸಿರುತ್ತೇವೆ. ಸಂಘದ ದುಡಿಯುವ ಬಂಡವಾಳವು ರೂ. ೧೯೦ ಕೋಟಿಯಷ್ಟಾಗಿರುತ್ತದೆ. ನಮ್ಮ ಸಂಸ್ಥೆಯ ವಾರ್ಷಿಕ ವ್ಯವಹಾರವು ರೂ. ೯೦೦ ಕೋಟಿಗೂ ಮಿಕ್ಕಿದ್ದು, ಠೇವಣಿ ಸಂಗ್ರಹ ಮತ್ತು ವಿವಿಧ ರೀತಿಯ ಸಾಲ ವಿತರಣೆಯಲ್ಲಿ ನಿರಂತರ ಪ್ರಗತಿಯಾಗಿದ್ದು ಪ್ರತಿವರ್ಷ ಲಾಭ ಗಳಿಸಿ ೨೦೨೨-೨೩ನೇ ಸಾಲಿಗೆ ಸದಸ್ಯರಿಗೆ ಶೇ. ೨೦ ರಷ್ಟು ಡಿವಿಡೆಂಟ್ ವಿತರಿಸಿರುತ್ತೇವೆ ಎಂದು ಹೇಳಿದರು.
ಸಂಸ್ಥೆಯು ೨೫ ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಇದರ ಸವಿನೆನಪಿಗಾಗಿ ಬೆಳ್ಳಿ ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದು, ಇದರ ನೆನಪಿಗಾಗಿ ನಮ್ಮ ಶಿಕ್ಷಣ ಸಂಸ್ಥೆಯಾಗಿ ಉತ್ತಮ ಸೇವೆ ನೀಡುತ್ತಿರುವ ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯ ಶಾಲಾ ೨ ಕೊಠಡಿಗಳನ್ನು ನಿರ್ಮಿಸಿಕೊಡುವ ತೀರ್ಮಾನವನ್ನು ಆಡಳಿತ ಮಂಡಳಿ ಕೈಗೊಂಡಿದ್ದು, ಗುದ್ದಲಿಪೂಜೆಯನ್ನು ಮಾಡಲಿzವೆ. ನಂತರ ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ, ಇತರೆ ಸಹಕಾರ ಸಂಘಗಳಿಗೆ, ನಮ್ಮ ಸಂಸ್ಥೆಯ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ, ಸಲಹಾ ಸಮಿತಿಯವರಿಗೆ ಹಾಗೂ ಸಿಬ್ಬಂದಿಗಳಿಗೆ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿರುತ್ತೇವೆ. ಕೃಷಿಪತ್ತಿನ ಸಹಕಾರ ಸಂಘಗಳಿಗೆ ಮತ್ತು ಇತರೆ ಸಹಕಾರ ಸಂಘಗಳಿಗೆ ಹಗ್ಗಜಗ್ಗಾಟ, ಅದೃಷ್ಟ ಪುರುಷ ಮತ್ತು ಅದೃಷ್ಟ ಮಹಿಳೆ. ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸದಸ್ಯರಿಗೆ ನಿಧಾನ ಬೈಕ್/ಸ್ಕೂಟಿ ಓಡಿಸುವುದು, ಲಕ್ಕಿ ಗೇಮ್, ಗುಂಡೆಸೆತ ಮತ್ತು ಒಂದು ನಿಮಿಷದ ಸ್ಪರ್ಧೆ, ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸಲಹಾ ಸಮಿತಿಯವರಿಗೆ ಹಿರಿಯರ ನಡಿಗೆ ಸ್ಪರ್ಧೆ, ಭಾಷಣ ಸ್ಪರ್ಧೆ, ಲಕ್ಕಿ ಗೇಮ್ ಮತ್ತು ಒಂದು ನಿಮಿಷದ ಸ್ಪರ್ಧೆ. ಸಿಬ್ಬಂದಿಗಳಿಗೆ ಹಗ್ಗಜಗ್ಗಾಟ, ನಿಧಾನ ಬೈಕ್/ಸ್ಕೂಟಿ ಓಡಿಸುವುದು, ಗುಂಡೆಸೆತ ಮತ್ತು ಲಕ್ಕಿ ಗೇಮ್ ಸ್ಪರ್ಧೆ ನಡೆಸಲಿzವೆ ಎಂದು ಹೇಳಿದರು.
ಈ ಕ್ರೀಡಾ ಸಮ್ಮಿಲನ ಕಾರ್ಯಕ್ರಮವನ್ನು ಪ್ರಶಸ್ತಿ ಪುರಸ್ಕೃತ ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಪಿ ಸಿ ಜಯರಾಮರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು ಮತ್ತು ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಸುಳ್ಯ ಇದರ ಅಧ್ಯಕ್ಷರಾದ ಚಂದ್ರಾ ಕೋಲ್ದಾರ್ ಭಾಗವಹಿಸಲಿದ್ದಾರೆ ಎಂದವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ನಿರ್ದೇಶಕರುಗಳಾದ ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ಹೇಮಚಂದ್ರ ಕುತ್ಯಾಳ ಹಾಗೂ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ಇದ್ದರು.