ದಿನಾಂಕ:10.02.2024 ರಂದು ರಾತ್ರಿ ಸುಳ್ಯ ಕಸಬಾ ಗ್ರಾಮದ, ಬಸ್ಮಡ್ಕ ಎಂಬಲ್ಲಿ, ಈರಯ್ಯ ಡಿ ಎನ್ ಪೊಲೀಸ್ ಉಪನಿರೀಕ್ಷಕರು (ಕಾ&ಸು)ಸುಳ್ಯ ಪೊಲೀಸ್ ಠಾಣೆರವರು ಮತ್ತು ಸಿಬ್ಬಂದಿಗಳು ಅಕ್ರಮ ಮರಳು ಸಾಗಾಟ ನಡೆಸುವ ಲಾರಿಯನ್ನು ವಶಕ್ಕೆ ಕಡೆದ ಪ್ರಕರಣ ಇದೀಗ ವರದಿಯಾಗಿದೆ.
ಕೆಎ 19 ಎಎ 4295ನೇ ಟಿಪ್ಪರ್ ಲಾರಿಯನ್ನು ತಪಾಸಣೆಗಾಗಿ ಪೋಲೀಸ್ ಅಧಿಕಾರಿಗಳು ನಿಲ್ಲಿಸಿದಾಗ ಲಾರಿಯ ಚಾಲಕನು ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದು ಈ ವೇಳೆಯಲ್ಲಿ ಲಾರಿಯನ್ನು ಪರಿಶೀಲಿಸಿದಾಗ ಮರಳು ತುಂಬಿರುವುದು ಕಂಡುಬಂದಿದ್ದು ಲಾರಿಯಲ್ಲಿ ತಂಬಿದ್ದ ಮರಳುವಿಗೆ ಗಣಿ ಇಲಾಖೆಯಿಂದ ಪರವಾನಿಗೆ ಪಡೆಯದೇ ಸರ್ಕಾರಿ ಸ್ವತ್ತಾದ ಮರಳನ್ನು ಕಳ್ಳತನದಿಂದ ಸಾಗಿಸುತ್ತಿರುವುದು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಮುಂದಿನ ಕಾನುನುಕ್ರಮಕ್ಕಾಗಿ ಲಾರಿಯನ್ನು ಸ್ವಾಧೀನಪಡಿಸಿ, ಟಿಪ್ಪರ್ ಲಾರಿಯ ಚಾಲಕ ಮತ್ತು ಮಾಲಕರ ವಿರುದ್ದ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 21/2024 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇನ್ನಾದರು ಎಚ್ಚೆತ್ತು ಗಣಿ ಇಲಾಖೆಯು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವರೇ ಅಕ್ರಮ ಮರಳು ಸಾಗಾಟದರಾರ ಮೇಲೆ ಎಂದು ಕಾದು ನೋಡಬೇಕಿದೆ.