
ಸುಳ್ಯ ಪೊಲೀಸ್ ವೃತ್ತದ ನೂತನ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಂಡು ಕೆ . ಸತ್ಯನಾರಾಯಣ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರುವಿನಿಂದ ಸುಳ್ಯಕ್ಕೆ ವರ್ಗಾವಣೆಗೊಂಡು ಬಂದ ಅವರನ್ನು ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿ ಹಾಗೂ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನೂತನ ವೃತ್ತ ನಿರೀಕ್ಷಕರನ್ನು ಸ್ವಾಗತಿಸಿದರು.
ಕೆ. ಸತ್ಯನಾರಾಯಣರವರು ಶೃಂಗೇರಿ ಮೂಲದವರು. ಬೆಂಗಳೂರು, ಶ್ರೀರಾಂಪುರ, ಶಿಗ್ಗಾವಿ, ಚಿಕ್ಕಮಗಳೂರು, ಕಡೂರು, ಮುಂತಾದ ಕಡೆಗಳಲ್ಲಿ ಇವರು ಕರ್ತವ್ಯ ನಿರ್ವಹಿಸಿದ್ದಾರೆ. ಉತ್ತಮ ಸೇವೆಗೆ 2018ರಲ್ಲಿ ರಾಷ್ಟ್ರಪತಿ ಪದಕ,ಹಾಗೂ 2019ರಲ್ಲಿ ಮುಖ್ಯಮಂತ್ರಿ ಪದಕವನ್ನು ಪಡೆದುಕೊಂಡಿದ್ದಾರೆ.