Ad Widget

ಮಂಡಲ ಅಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವಂತಹ ಗೊಂದಲವನ್ನು ವೈಭವೀಕರಿಸುವ ಅಗತ್ಯವಿಲ್ಲ – ಬಿಜೆಪಿ ಮಂಡಲ ಸ್ಪಷ್ಟನೆ

ಸುಳ್ಯ ಬಿಜೆಪಿಯ ಕಾರ್ಯಕರ್ತರು ಯಾವತ್ತಿದ್ದರೂ ನಿಷ್ಠೆ ,ಪ್ರಾಮಾಣಿಕತೆ, ಬದ್ಧತೆ ಸ್ವಯಂಸೇವೆ, ಸ್ವಾವಲಂಬಿತನದಲ್ಲಿ ಮುಂಚೂಣಿಯಲ್ಲಿರುವವರು.
ಸುಳ್ಯ ಬಿಜೆಪಿಗೆ ಸುಳ್ಯ ಬಿಜೆಪಿಯೇ ಸಾಟಿ. ಸುಳ್ಯ ಮಂಡಲದ ಮುಂದಿನ ಅವಧಿಯ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯಲ್ಲಿ ಆಗಿರುವಂತಹ ವ್ಯತ್ಯಾಸವನ್ನು ಸರಿಪಡಿಸುವಂತಹ ಕೆಲಸ ಕಾರ್ಯಗಳು ಸುಳ್ಯ ಬಿಜೆಪಿಯ ಕಡೆಯಿಂದಲೇ ನಡೆಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಯಾವುದೇ ರೆಸಾರ್ಟ್ ಗಳಲ್ಲಿ ಅಥವಾ ನಿಗೂಢ ಪ್ರದೇಶಗಳಲ್ಲಿ ನಡೆಯುತ್ತಿಲ್ಲ. ಪ್ರಜಾಸತ್ತಾತ್ಮಕ ಅಭಿಪ್ರಾಯಕ್ಕಾಗಿ ಕಾರ್ಯಕರ್ತರ ತಂಡದ ಮಧ್ಯೆಯೇ ವಿಚಾರ ಮತ್ತು ಬೆಳವಣಿಗೆಗಳನ್ನು ಹಂಚಿಕೊಳ್ಳುವ , ಪರಿಹಾರ ಕಂಡುಕೊಳ್ಳುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಮಾಧ್ಯಮಗಳು ಕೂಡ ಈ ಬಗ್ಗೆ ವರದಿಯನ್ನು ಮಾಡುವಂತಹದು ಸಹಜ ಪ್ರಕ್ರಿಯೆ, ಆದರೆ ಇದನ್ನ ವಿರೋಧಿಗಳು, ಹಿತಶತ್ರುಗಳು ಏನೋ ಬಿಜೆಪಿಯ ಒಳಗಡೆ ಭೂಕಂಪ ಆಗಿದೆ ಅಲ್ಲೋಲಕಲ್ಲೋಲ ಆಗಿದೆ ಎಂದು ಸಂಭ್ರಮಿಸುವಂಥ ಅಗತ್ಯವಿಲ್ಲ, ಅಂತ ವಿಚಾರವೂ ಅಲ್ಲ. ನಮ್ಮ ಆಂತರಿಕವಾಗಿರುವಂತಹ ಸಣ್ಣಪುಟ್ಟ ವ್ಯತ್ಯಾಸಗಳನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ. ಪರಿಹರಿಸಿಕೊಳ್ಳುವಂತ ಶಕ್ತಿ ಸಂಘಟನೆಗೆ ಇದೆ. ಹಿರಿಯರು ವಿಮರ್ಶೆ ,ಮಾರ್ಗದರ್ಶನ ಮೂಲಕ ಅದನ್ನು ಸರಿಪಡಿಸುತ್ತಾರೆ. ಅಲ್ಲದೇ ಸುಳ್ಯ ಬಿಜೆಪಿ ಕಚೇರಿಗೆ ಕಾರ್ಯಕರ್ತರು ಬೀಗ ಜಡಿದಿದ್ದಾರೆ ಎನ್ನುವಂತ ವಿಚಾರವನ್ನು ಉಲ್ಲೇಖಿಸುತ್ತಾ ಅದನ್ನೇ ವೈಭವೀಕರಿಸುವಂತಹ ಕಾರ್ಯ ಮಾಡುತ್ತಿರುವುದು ಅವರುಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಕಾರ್ಯಕರ್ತರಿಂದ ಆಗಿರುವಂತಹ ಗೊಂದಲ, ವ್ಯತ್ಯಾಸ ಅಷ್ಟೇ, ಅದನ್ನು ಅವರುಗಳೇ ತಕ್ಷಣ ತಿದ್ದಿಕೊಂಡಿರುವಂತಹದ್ದು ಸಂಘಟನೆ ನೀಡಿರುವಂತಹ ಶಿಕ್ಷಣ, ಸಿದ್ದಾಂತಕ್ಕೆ ಹಿಡಿದ ಕೈಗನ್ನಡಿ. ತಪ್ಪನ್ನು ತಿದ್ದಿಕೊಳ್ಳುವಂತಹ ಗುಣ ಕೂಡ ನಮ್ಮ ಸಂಘಟನೆ ಕಲಿಸಿರುವಂಥ ವಿದ್ಯೆ. ಟೀಕೆ ಮಾಡುವ ತೆವಲಿನವರಿಗೆ ಇದೊಂದು ಜಡ ವಿಷಯವಷ್ಟೇ ಹೊರತು ಏನೂ ಗೊಂದಲವಲ್ಲ.
ಕೆಲವರು ತಮ್ಮನ್ನು ತಾವು ಮಹಾಜ್ಞಾನಿಗಳೆಂದು ಬಿಂಬಿಸಿಕೊಳ್ಳುವ ಭರದಲ್ಲಿ ನಮ್ಮ ಶಬ್ದ ಭಂಡಾರ, ನಮ್ಮ ಬರವಣಿಗೆಯಿಂದಲೇ ಸಂಘಟನೆ, ಸಮಾಜ, ದೇಶ ಮುನ್ನಡೆಯುತ್ತಿದೆ ಎನ್ನುವ ಭ್ರಮೆಯಲ್ಲಿದ್ದಾರೆ .
ಇಳಿದು ಕೆಲಸ ಮಾಡುವಂತಹ ಆಸಕ್ತಿ, ಚೈತನ್ಯ, ಅವಕಾಶ ಇಲ್ಲದೆ ಮಾನಸಿಕ ಸೋಮಾರಿಗಳು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಕೀಳು ಮನಸ್ಥಿತಿಯನ್ನು ತೋರಿಸುತ್ತಾ, ಸ್ವತಃ ತಾನು ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರ ಮನೆಗೆ ಕಲ್ಲೆಸೆಯುವಂಥ ಮೂರ್ಖತನದ ಮಾನಸಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ, ಆ ಮೂಲಕ ವಿಘ್ನ ಸಂತೋಷಿಗಳಾಗಿ ಒಂದು ರೀತಿಯಾದಂತಹ ವಿಕೃತ ಖುಷಿಯನ್ನು ಪಡೆಯುತ್ತಿದ್ದಾರೆ.
ಬಿಜೆಪಿಯ, ಸಂಘಟನೆಯ ಕಾರ್ಯಕರ್ತರು ಮಾಡುವಂತಹ ನಿಸ್ವಾರ್ಥ ಸೇವೆ, ಸ್ವಂತದ ಎಲ್ಲವನ್ನೂ ಬಿಟ್ಟು, ದುಡಿಮೆಯ ಗಳಿಕೆಯ ಭಾಗವನ್ನು ವಿನಿಯೋಗಿಸುತ್ತ ಕೆಲಸ ಮಾಡುತ್ತಿರುವವರ ಆ ಶ್ರಮ, ಸವಾಲಿನ ಕೆಲಸ ಕಾರ್ಯಗಳು ಯಾವುದನ್ನು ಗಮನಿಸದ ಮೌಡ್ಯ ಮಾನಸಿಕ ಸೋಮಾರಿಗಳಿಗೆ ಆವರಿಸಿರುವದನ್ನು ದೇವರು ಆದಷ್ಟು ಬೇಗ ತೆರವುಗೊಳಿಸಲಿ, ಸಂಘಟನೆಗಳ, ಬಿಜೆಪಿಯ ಚಟುವಟಿಕೆಗಳಲ್ಲಿ ಒಂದಿನಿತೂ ತೊಡಗಿಸಿಕೊಳ್ಳದೆ ಅರಿವಿನ ಕೊರತೆಯಿಂದ , ಸಾಮಾಜಿಕ ಜಾಲತಾಣದ ಮೂಲಕ ವಿತಂಡವಾದ, ವಿಕೃತಿಯನ್ನು ನಿಲ್ಲಿಸಲಿ ಎನ್ನುವುದು ನಮ್ಮ ಆಶಯ.
ಸುಳ್ಯ ಬಿಜೆಪಿ ಜನಸಂಘದ ಕಾಲದ ಹಿರಿಯರ ತ್ಯಾಗ ಬಲಿದಾನ ಪರಿಶ್ರಮದ ಫಲವಾಗಿ ಗಟ್ಟಿಯಾಗಿ ನೆಲೆಯೂರಿದೆ ಅದನ್ನು ಇಂದಿನ ಕಾರ್ಯಕರ್ತರು ಅನ್ಯಾನ್ಯ ಜವಾಬ್ದಾರಿಯ ಪ್ರಮುಖರು ಸುಸ್ಥಿತಿಯಲ್ಲಿ ಮುನ್ನಡೆಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ‌. ಸುಳ್ಯ ಬಿಜೆಪಿಯ ಗೊಂದಲವನ್ನ ಸುಳ್ಯ ಬಿಜೆಪಿಗೆ ಬಗೆಹರಿಸುವಂತಹ ಶಕ್ತಿ ಇದೆ, ಇನ್ನಷ್ಟು ಶಕ್ತಿಯುತವಾಗಿ ಸುಳ್ಯ ಬಿಜೆಪಿ ತನ್ನ ಚಟುವಟಿಕೆಗಳನ್ನ ಮಾಡಲಿದೆ. ಇನ್ನಷ್ಟು ಬಲಿಷ್ಠವಾಗಿ ಪಕ್ಷ ಸಂಘಟನೆಯೊಂದಿಗೆ ಮುಂದಿನ ಚುನಾವಣೆಯ ಮೂಲಕ ಫಲಿತಾಂಶವನ್ನು ಪ್ರಕಟಪಡಿಸಲಿದೆ ಎಂದು ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳಾದ ಸುಭೋಧ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!