Ad Widget

ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ – ಕೋರ್ ಕಮಿಟಿ ಸಭೆ ಮುಕ್ತಾಯ – ನಾಯಕರ ನಿರ್ಗಮನ – ಸಭೆಯ ಬಳಿಕ ಜಿಲ್ಲಾಧ್ಯಕ್ಷರಿಂದ ಮಾಹಿತಿ




ಸುಳ್ಯದಲ್ಲಿ ನೂತನವಾಗಿ ಮಂಡಲ ಸಮಿತಿ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕವಾಗುತ್ತಿದ್ದಂತೆ ಸುಳ್ಯದಲ್ಲಿ ಅಸಮಾಧಾನಗಳು ಭುಗಿಲೆದ್ದು, ಕಛೇರಿಗೆ ಬೀಗ ಹಾಕಿದ್ದರು. ಈ ಬಗ್ಗೆ ಜ.6 ರಂದು ಮುಂಜಾನೆಯಿಂದಲೇ ಮೀಟಿಂಗ್ ಮ್ಯಾರಥಾನ್ ನಡೆದಿದ್ದು ಸಂಜೆಯ ವೇಳೆಗೆ ಮುಕ್ತಾಯಗೊಂಡಿದೆ.
ಈ ಬಗ್ಗೆ ಜಿಲ್ಲಾಧ್ಯಕ್ಷರು ಪತ್ರಕರ್ತರ ಜತೆ ಮಾತನಾಡಿ ” ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ಅಸಮಾಧಾನಗಳನ್ನು ನಿವಾರಿಸುವ ರೀತಿಯಲ್ಲಿ ಕೆಲಸಗಳು ಮಾಡಿದ್ದೇವೆ ಮತ್ತು ಸುಳ್ಯದಲ್ಲೂ ಯಾವುದೇ ಗೊಂದಲಗಳು ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆ ಪೂರ್ವ ತಯಾರಿ ಮತ್ತು ಪಕ್ಷದ ಆಂತರಿಕ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ತೆರಳಿದರು.

ಮಂಡಲ ನಾಯಕರಲ್ಲಿ ವಿಚಾರಿಸಿದಾಗ ಎಲ್ಲವು ಚರ್ಚೆಗಳು ಆಗಿದೆ. ಆದರೆ ನಾವು ಯಾರು ಪಕ್ಷದ ವಿರುದ್ಧವಲ್ಲ. ಏಕಾ ಏಕಿಯಾಗಿ ಕೊರ್ ಕಮಿಟಿ ಸದಸ್ಯರುಗಳ ಗಮನಕ್ಕೆ ಬಾರದೇ, ನಮಗೆ ತಿಳಿಸದೇ ಅವರನ್ನು ಆಯ್ಕೆ ಮಾಡಿರುವುದು ಮಾತ್ರ ನಮಗೆ ನೋವಿನ ವಿಚಾರವಾಗಿದೆ. ಅಲ್ಲದೇ ಇದೀಗ ಜಿಲ್ಲಾಧ್ಯಕ್ಷರ ಮತ್ತು ಪ್ರಮುಖರ ಮುಂದೆ ನಮ್ಮ ನೋವುಗಳನ್ನು ತಿಳಿಸಿದ್ದೇವೆ. ಮುಂದೆ ಜಿಲ್ಲೆಯ ನಾಯಕರೇ ಇದರ ಬಗ್ಗೆ ಮಾಹಿತಿ ನೀಡುವರು ಎಂದು ಪ್ರಮುಖ ನಾಯಕರೊರ್ವರು ತಿಳಿಸಿದ್ದಾರೆ . ಅಲ್ಲದೇ ಬಿಜೆಪಿ ಸುಳ್ಯ ಮಂಡಲದ ಒಳಜಗಳಗಳು ಬೂದಿ ಮುಚ್ಚಿದ ಕೆಂಡದಂತಿದ್ದು ಇದೀಗ ಕಾರ್ಯಕರ್ತರ ನಡುವೆ ಒಂದೇ ಸಮುದಾಯಕ್ಕೆ ಮೀಸಲಾತಿ ನೀಡಿದಂತೆ ಅಧ್ಯಕ್ಷರ ನೇಮಕವಾಗುತ್ತಿದ್ದು, ಇದನ್ನು ಕೂಡ ಮುಂದಿನ ದಿನಗಳಲ್ಲಿ ಬದಲಾಯಿಸಬೇಕು. ಅಲ್ಲದೇ ಬಿಜೆಪಿ ಪಕ್ಷವು ಸಂವಿಧಾನ ಆಧರಿತವಾಗಿ ಕೆಲಸ ಮಾಡುತ್ತಿದೆ. ಅದೆ ರೀತಿಯಲ್ಲಿ ನಡೆಯುತ್ತಿದೆ.‌ ಕೋರ್ ಕಮಿಟಿ ನಿರ್ಧಾರಗಳಿಗೆ ಬೆಲೆ ಇಲ್ಲವೇ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದು ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಕೋರ್ ಕಮಿಟಿ ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ನಿಯೋಜಿತ ಅಧ್ಯಕ್ಷರಾದ ವೆಂಕಟ್ ವಳಲಂಬೆ , ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ , ರಾಕೇಶ್ ರೈ ಕೆಡೆಂಜಿ , ವೆಂಕಟ್ ದಂಬೆಕೋಡಿ , ಎಸ್ ಎನ್ ಮನ್ಮಥ , ಎ ವಿ ತೀರ್ಥರಾಮ , ಕೃಷ್ಣ ಶೆಟ್ಟಿ ಕಡಬ ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!