Ad Widget

ಏನೆಕಲ್ : ಅಕ್ಷಯ ಬಾಬ್ಲುಬೆಟ್ಟು ಅವರಿಗೆ ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪ್ರದಾನ

ಅಕ್ಷಯ ಬಾಬ್ಲು ಬೆಟ್ಟು ಹನುಮಾನಾಸನದಲ್ಲಿ 50 ನಿಮಿಷ 20 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮತ್ತು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

. . . . . . . . .

ಇದರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು 05 ಫೆಬ್ರವರಿ 2024 ಸೋಮವಾರದಂದು ಸಂತೃಪ್ತಿ ಸಭಾಭವನ ಏನೇಕಲ್ಲಿ ನಲ್ಲಿ ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ಶ್ರೀ ಸುಂದರ ಗೌಡ, ಪದಾಧಿಕಾರಿಗಳು ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಉಡುಪಿ ಜಿಲ್ಲೆ ನೆರವೇರಿಸಿದರು ಈ ಸಂದರ್ಭದಲ್ಲಿ ಶ್ರೀ ರೇಗಪ್ಪ ಗೌಡ, ಪ್ರಗತಿ ಪರ ಕೃಷಿಕರು, ಶ್ರೀಮತಿ ಭವ್ಯ ಜೇನುಕೋಡಿ, ಸದಸ್ಯರು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ , ಶ್ರೀ ರತನ್ ಕಲ್ಕುದಿ ಕಾರ್ಯನಿರ್ವಾಹಣಧಿಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಏನೇಕಲ್ಲು,
ಶ್ರೀಮತಿ ಚಂದ್ರಿಕಾ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲು, ಶ್ರೀಮತಿ ಅಂಬಿಕಾ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲು ಶರತ್ ಮರ್ಗಿಲಡ್ಕ, ಯೋಗ ಶಿಕ್ಷಕರು ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ ಮತ್ತು ಅಮರ ಯೋಗ ಕೇಂದ್ರ ಗುತ್ತಿಗಾರು.ಮತ್ತು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ಮತ್ತು ಶಾಲಾ ಗುರುಗಳಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಕ್ಷಯ ಬಾಬ್ಲುಬೆಟ್ಟು ರವರಿಂದ ಯೋಗ ಪ್ರದರ್ಶನ ನೀಡಲಾಯಿತು.
ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲಿ ನಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಇವರು ಶ್ರೀ ಮೋಹನ್ ಮತ್ತು ಶ್ರೀಮತಿ ದಿವ್ಯ ರವರ ಪುತ್ರಿ. ಇವರು ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading