ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ್ದಾರೆಂದು ಆರೋಪಿಸಿ ಅಪ್ರಾಪ್ತೆಯೊರ್ವಳು ದಿನಾಂಕ 31-10-23 ರಂದು ದೂರು ದಾಖಲಿಸಿದ ಘಟನೆ ವರದಿಯಾಗಿದೆ.
ಅಪ್ರಾಪ್ತ ಬಾಲಕಿಯನ್ನು ಬೆಳ್ಳಾರೆ ಮೂಲದ ಆಟೋ ಚಾಲಕನೊಬ್ಬ ತನ್ನ ಕಾಮತೃಷೆಗೆ ಬಳಸಿಕೊಂಡು ಬಳಿಕ ಆಕೆಯೊಂದಿಗೆ ಮಾತನಾಡುವುದಕ್ಕೆ ನಿರಾಕರಿಸಿದ್ದಾನೆ. ಅಪ್ರಾಪ್ತ ಬಾಲಕಿಯ ಜತೆ ಪ್ರೀತಿಯ ನಾಟಕವಾಡಿ ಪುಸಲಾಯಿಸಿ ಲಾಡ್ಜ್ ಗೆ ಕರೆದೊಯ್ದು ಕಳೆದ ಜೂನ್ ನಲ್ಲಿಯೇ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ. ಬಳಿಕ ಆಕೆಯೊಂದಿಗೆ ಮಾತನಾಡುವುದನ್ನು ದಿಢೀರ್ ನಿಲ್ಲಿಸಿದ್ದರಿಂದ ಮನನೊಂದು ಅಪ್ರಾಪ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಫೋಕ್ಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದ್ದು ಬೆಳ್ಲಾರೆ ಮೂದ ಆಟೋ ಚಾಲಕ ಮಹೇಶ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.