ಬದುಕಿನಲ್ಲಿ ಎಲ್ಲವನ್ನೂ ಕಷ್ಟಪಟ್ಟು ಗಳಿಸುವ ನಾವು ಗಳಿಸಿದ್ದನ್ನು ಉಳಿಸಿಕೊಳ್ಳುವುದರಲ್ಲಿ ಸೋತುಬಿಡುತ್ತೇವೆ…ಭವಿಷ್ಯದ ಬಗ್ಗೆ ಯೋಚಿಸುತ್ತಾ ಬದುಕಬೇಕಾದ ನಾವು ಈ ದಿನ, ಈ ಕ್ಷಣಕ್ಕಾಗಿ ಮಾತ್ರ ಬದುಕುತ್ತೇವೆ, ನಾಳೆಗಳ ಬಗ್ಗೆ ಚಿಂತೆ ಮಾಡುವುದನ್ನೇ ಮರೆತುಬಿಡುತ್ತೇವೆ…ನಮ್ಮವರು-ತಮ್ಮವರ ಬಗ್ಗೆ ಯೋಚಿಸುತ್ತಾ ಬದುಕಬೇಕಾದ ನಾವು ನಾನು-ನನ್ನದು ಎನ್ನುವ ಸ್ವಾರ್ಥದಿಂದಲೇ ಬದುಕುತ್ತೇವೆ…ಪ್ರೀತಿ-ಸ್ನೇಹವನ್ನು ಹಂಚುತ್ತಾ ಬದುಕಬೇಕಾದ ನಾವು ಸದಾ ದ್ವೇಷ-ಅಸೂಯೆಯಿಂದಲೇ ಬದುಕುತ್ತೇವೆ…ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸಬೇಕಾದ ನಾವು ಕೆಲವೊಮ್ಮೆ ಇನ್ನೊಬ್ಬರ ಕಷ್ಟಗಳನ್ನು ನೋಡಿಯೂ ನೋಡದಂತೆ ಕಣ್ಮುಚ್ಚಿ ಕೂರುತ್ತೇವೆ…ಸದಾ ಇನ್ನೊಬ್ಬರ ಕಣ್ಣೀರನ್ನು ಒರೆಸಬೇಕಾದ ನಾವು ಕೆಲವೊಮ್ಮೆ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಕೆಲವೊಬ್ಬರ ಕಣ್ಣೀರಿಗೆ ಕಾರಣವಾಗುತ್ತಲೇ ಇರುತ್ತೇವೆ…ಸದಾ ಇನ್ನೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುವ ನಾವು ನಾವುಗಳು ಮಾಡಿದ ತಪ್ಪುಗಳನ್ನೇ ಮರೆತುಬಿಡುತ್ತೇವೆ…ಇಲ್ಲಿ ನಾವು-ನೀವು ಯಾರೂ ಪರಿಪೂರ್ಣರಲ್ಲ, ಏಕೆಂದರೆ ಸದಾ ಇನ್ನೊಬ್ಬರ ಬದುಕನ್ನೇ ಬೆರಳಿಟ್ಟು ತೋರಿಸುವ ನಾವು ನಮ್ಮ ಬದುಕನ್ನು ಸರಿಪಡಿಸಿಕೊಳ್ಳುವುದರಲ್ಲಿ ಅದೇಕೋ ಹಿಂದೆ ಉಳಿದುಬಿಡುತ್ತೇವೆ. ಮೊದಲು ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ, ಇನ್ನು ಮುಂದಾದರೂ ಭವಿಷ್ಯದ ಬಗ್ಗೆ ಯೋಚಿಸೋಣ, ದ್ವೇಷ-ಅಸೂಯೆಗಳನ್ನು ಬಿಟ್ಟು ನಿಸ್ವಾರ್ಥದಿಂದ ಇನ್ನೊಬ್ಬರ ಕಷ್ಟಗಳಿಗೆ ಹೆಗಲಾಗುತ್ತಾ, ಇನ್ನೊಬ್ಬರ ಕಣ್ಣೀರನ್ನು ಒರೆಸುತ್ತಾ ಸಾಧ್ಯವಾದಷ್ಟು ಪ್ರೀತಿಯನ್ನು ಹಂಚುತ್ತಾ ಬದುಕೋಣ. ನಮ್ಮನ್ನು ನಾವು ಸರಿಪಡಿಸಿಕೊಂಡರೆ ಮತ್ತೆಲ್ಲವೂ ತನ್ನಿಂತಾನೇ ಸರಿಯಾಗುತ್ತದೆ…
✍️ಉಲ್ಲಾಸ್ ಕಜ್ಜೋಡಿ