ಪೈಂಬೆಚ್ಚಾಲು ಸರ್ಕಾರಿ ಶಾಲೆಯಲ್ಲಿ ಕಳೆದ ಏರಡು ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಕಚೇರಿಯ ಕಿಡಿಕಿ ಮೂಲಕ ಸಲಾಕೆ ಇನ್ನಿತರ ವಸ್ತುಗಳಿಂದ ಕಚೇರಿಯಲ್ಲಿರುವ ಸಾಮಾಗ್ರಿಗಳನ್ನು ಹಾನಿಗೊಳಿಸಿರುವ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಯಾರೋ ಕಿಡಿಗೇಡಿಗಳು ಶಾಲಾ ಕಚೇರಿಯ ಬೀಗ ಒಡೆಯಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪರಿಶೀಲನೆಗೆ ಬಂದು ತೆರಳಿದ ಅದೇ ದಿನ ರಾತ್ರೆಯ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬೀಗ ಒಡೆಯಲು ಪ್ರಯತ್ನ ಪಟ್ಟಿರುವ ಕುರಿತು ತುರ್ತುಗಿ ಶಾಲಾ ಎಸ್ ಡಿ ಎಂ ಸಿ, ಪೋಷಕರ ಹಾಗೂ ವಿದ್ಯಭಿಮಾನಿಗಳ ಸಬೇ ಕರೆಯಲಾಗಿತ್ತು. ಶಾಲಾ ಕರ್ತವ್ಯದ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಯಾರೇ ಶಾಲಾ ಆವರಣದ ಒಳಗೆ ಬಂದ ವಿಚಾರ ಗೊತ್ತಾದ್ರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಸಾರ್ವಜನಿಕರಿಗೆ ಶಾಲಾ ಕರ್ತವ್ಯದ ಸಮಯ ಹೊರತುಪಡಿಸಿ ಸಾರ್ವಜನಿಕರಿಗೆ ನಿಶೇದಿಸುವುದು ಎಂದು ಸರ್ವಾನಮತದಿಂದ ತೀರ್ಮಾನಿಸಲಾಯಿತು. ಸಿಸಿ ಕ್ಯಮೆರಾಗಳನ್ನು ಅಳವಡಿಸುವುದು ಎಂದು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಪಂಚಾಯತ್ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಶಿಕ್ಷಕಿಯರು, ವಿದ್ಯಾಭಿಮನಿಗಳು ಉಪಸ್ಥಿತರಿದ್ದರು.
.