Ad Widget

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ) ಸುಳ್ಯ.ಇದರ ವಾರ್ಷಿಕ ಮಹಾಸಭೆ.

ಸುಳ್ಯ: ಸುಳ್ಯದ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಇದರ ವಾರ್ಷಿಕ ಮಹಾಸಭೆ ಜರಗಿತು. ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ರೈ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ನೋಟಿಸ್ ಟ್ರಸ್ಟ್ ನ ನಿರ್ದೇಶಕರಾದ ವೀಣಾ ಮೊಂಟೆಡ್ಕ ಓದಿ ದಾಖಲಿಸಿದರು. ಪ್ರಾಸ್ತಾವಿಕ ಮಾತಿನೊಂದಿಗೆ 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ಮಂಡಿಸಿದರು.

. . . . . . .


2022-23 ನೇ ಸಾಲಿನ ಲೆಕ್ಕ ಪರಿಶೀಲನಾ ವರದಿಯನ್ನು ಟ್ರಸ್ಟ್ ನ ಖಜಾಂಜಿ ಜಯಂತಿ ಅಜ್ಜಾವರ ಮಂಡಿಸಿದರು. ವಾರ್ಷಿಕ ವರದಿ ಹಾಗು ಲೆಕ್ಕ ಪರಿಶೀಲನಾ ವರದಿಗಳನ್ನು ಸಭೆಯ ಒಪ್ಪಿಗೆಯ ಮೇರೆಗೆ ಅಂಗೀಕರಿಸಲಾಯಿತು.
ಟ್ರಸ್ಟ್ ಕಾನೂನು ಮತ್ತು ನಿಯಮ ಇಂಡಿಯನ್ ಟ್ರಸ್ಟ್ ಆಕ್ಟ್ 1882 ಬಗ್ಗೆ ಸುಳ್ಯದ ಪ್ರಸಿದ್ದ ಲೆಕ್ಕ ಪರಿಶೋಧಕರಾದ ಶ್ರೀ ಗಣೇಶ್ ಭಟ್ ಮಾಹಿತಿ ನೀಡಿದರು.


ಟ್ರಸ್ಟ್ ನ ವತಿಯಿಂದ ಬಟ್ಟೆ ಕೈ ಚೀಲವನ್ನು ಗಣೇಶ್ ಭಟ್ ಬಿಡುಗಡೆಗೊಳಿಸಿದರು.
” ನಮ್ಮ ಮನೆ ಹಸಿರು ಮನೆ” ಪ್ರಕೃತಿ ರಕ್ಷಣೆಯ ಪ್ರತಿಜ್ಞೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಇತ್ತೀಚಿಗೆ ಕೇಂದ್ರಸರಕಾರ ಜಾರಿಗೊಳಿಸಿದ ವಿಧೇಯಕ 33% ಮಹಿಳಾ ಮೀಸಲಾತಿಯನ್ನು ಸ್ವಾಗತಿಸಲಾಯಿತು.ಟ್ರಸ್ಟ್ ನ ಮೂಲಕ ಕೇಂದ್ರಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಟ್ರಸ್ಟ್ ನ ಸಂಘಟನಾ ಉದ್ದೇಶದಿಂದ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.ಟ್ರಸ್ಟ್ ನ
ಸಮವಸ್ತ್ರದ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಶಶಿಕಲಾ ಹರಪ್ರಸಾದ್ ಉಪಸ್ಥಿತರಿದ್ದರು.
ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಪುಷ್ಪಾಮೇದಪ್ಪ ಪ್ರಾರ್ಥಿಸಿದರು.
ಟ್ರಸ್ಟ್ ನ ಸಹ ಕೋಶಾಧಿಕಾರಿ ಶಾರದಾ ಶೆಟ್ಟಿ ಸ್ವಾಗತಿಸಿದರು.
ಟ್ರಸ್ಟ್ ನ ನಿರ್ದೇಶಕರಾದ ಸವಿತಾ ಕಾಯಾರ ಧನ್ಯವಾದ ಸಮರ್ಪಿಸಿದರು.
ಟ್ರಸ್ಟ್ ನ ಸಹ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರ ಮತ್ತು ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!