ಸುಳ್ಯ ತಾಲೂಕು ಕೋಡಿಯಾಲ ಗ್ರಾಮದ ಮೂವಪೆ ಅಂಗನವಾಡಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಅಹಾರ ಸಾಮಾಗ್ರಿಗಳನ್ನು ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಯಕರ್ತೆ ಶ್ರೀಮತಿ ಮೋಹಿನಿ ಎಂ ಎಂಬವರ ದೂರಿನಂತೆ, ದಿನಾಂಕ 19-10-2023 ರಂದು ಸಂಜೆಯಿಂದ ಮರುದಿನ ದಿನಾಂಕ 20-10-2023 ರಂದು ಬೆಳಿಗ್ಗಿನ ಅವಧಿಯಲ್ಲಿ ಯಾರೊ ಕಳ್ಳರು ಸದರಿ ಅಂಗನವಾಡಿ ಕೇಂದ್ರದ ಚಾವಣಿಯ ಹಂಚನ್ನು ಸರಿಸಿ ಒಳಪ್ರವೇಶಿಸಿ, ಅಂಗನವಾಡಿ ಕೇಂದ್ರದ ಒಳಗೆ ದಾಸ್ತನಿದ್ದ ಒಟ್ಟು ರೂ -9,690-/ ಮೌಲ್ಯದ ಆಹಾರ ಸಾಮಗ್ರಿಗಳನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ ಎಂ ಎಂಬವರ ದೂರಿನಲ್ಲಿ ತಿಳಿಸಿದ್ದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ : 69/2023 ಕಲಂ :454,457,380 ಐ. ಪಿ. ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
- Thursday
- November 21st, 2024