Ad Widget

ಸುಳ್ಯ ದಸರಾ ಉತ್ಸವ ಆರಂಭ , ಭವ್ಯವಾದ ಮೆರವಣಿಗೆ ಮೂಲಕ ಸಾಗಿ ಬಂದು ಪ್ರತಿಷ್ಟಾಪನೆ.


ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ , ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ (ರಿ.) ದಸರಾ ಉತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಶ್ರೀ ಶಾರದಾಂಬ ಉತ್ಸವವು ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಇಂದಿನಿಂದ ಒಂಭತ್ತು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದ್ದು,
ಅ.20ರಂದು ಬೆಳಿಗ್ಗೆ ನಗರದ ಜ್ಯೋತಿ ವೃತ್ತದಿಂದ ಶ್ರೀ ಶಾರದಾದೇವಿ ಮೂರ್ತಿಯ ಪ್ರತಿಷ್ಠಾ ಮೆರವಣಿಗೆಯು ಶ್ರೀ ಶಾರದಾಂಬ ಮತ್ತು ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳ ಹಾಗೂ ಭಕ್ತಾದಿಗಳ ಉಪಸ್ಥಿತಿಯಲ್ಲಿ
ನಡೆಯಿತು. ದಸರಾ ಉತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ರಾಜಕೀಯ ನಾಯಕರುಗಳಾದ ಗೋಕುಲ್ ದಾಸ್ , ಪಿ ಸಿ ಜಯರಾಮ , ಪಿ ಎಸ್ ಗಂಗಾಧರ , ಶಶಿಧರ ಎಂ ಜೆ ,ರಾಜು ಪಂಡಿತ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀ ದೇವಿಯ ಪ್ರತಿಷ್ಠಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು ದೇವಿಯ ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ಪುರೋಹಿತರಾದ ನಾಗರಾಜ್ ಭಟ್ ನೇತ್ರತ್ವದ ಸಮಿತಿ ನಡೆಸಿಕೊಟ್ಟರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading