ಯುವ ಜನಾಂಗಕ್ಕೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಎನ್‌ಎಸ್‌ಎಸ್‌ನಂತಹ ಸಂಘಟನೆಗಳು ಅತ್ಯಗತ್ಯ.ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವನೆ ಮತ್ತು ಸ್ವಚ್ಚತಾ ಜಾಗೃತಿ ಮೂಡಲು ವಿಶೇಷ ಶಿಬಿರಗಳು ಪೂರಕ. ಅಲ್ಲದೆ ಈ ಸಂದರ್ಭ ತ್ರಿವಳಿ ಯೋಧರನ್ನು ಗೌರವಿಸಿರುವುದು ಹೆಮ್ಮೆಯ ಸಂಗತಿ. ಯೋಧರಿಗೆ ನೀಡುವ ಗೌರವಾರ್ಪಣೆಯಿಂದಾಗಿ ಯುವ ವಿದ್ಯಾರ್ಥಿಗಳು ದೇಶಭಕ್ತಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಲು ಪೂರಕವಾಗುತ್ತದೆ ಎಂದು ಸುಬ್ರಹ್ಮಣ್ಯ ವಲಯದ ಉಪ ವಲಯಾರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ ಹೇಳಿದರು.
ಕೈಕಂಬ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶನಿವಾರ ನಿವೃತ್ತ ಯೋಧರನ್ನು ಗೌರವಿಸಿ ಅವರು ಮಾತನಾಡಿದರು. ಅರಣ್ಯ ಸಂರಕ್ಷಣೆಯು ಪ್ರತಿಯೊಬ್ಬನ ಉಸಿರಾಗಬೇಕು.ಮರ ಗಿಡಗಳನ್ನು ಮಕ್ಕಳಂತೆ ಪೋಷಿಸುವ ಮನೋಭಾವನೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಇದರಿಂದ ಸುಂದರ ನಾಳೆಗಳ ನಿರ್ಮಾಣ ಸಾಧ್ಯ. ಎಂದರು.
ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್ ಧ್ವಜಾರೋಹಣ ನೆರವೇರಿಸಿದರು. ಶಿಬಿರವನ್ನು ಕೈಕಂಬ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕಳಿಗೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ ವಹಿಸಿದ್ದರು. ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಕೀರ್ತ್ ಹೆಬ್ಬಾರ್ ವಿಸ್ಮಯ ವಿಶ್ವ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.ಕೈಕಂಬ ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ನಡುತೋಟ ಧ್ವಜಾರೋಹಣ ನೆರವೇರಿಸಿದರು.
ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್,ನಿವೃತ್ತ ಭಾರತೀಯ ಯೋಧರಾದ ಮಧುಕುಮಾರ್ ಎರ್ಮಾಯಿಲ್, ಸೋಮಶೇಖರ್, ದಿವ್ಯಪ್ರಕಾಶ್ ಎರ್ಮಾಯಿಲ್, ಅರಣ್ಯ ಇಲಾಖಾ ಸಿಬಂಧಿ ಮಹಾಂತೇಶ್, ಕೈಕಂಬ ಶಾಲಾ ಮುಖ್ಯಗುರು ಪವಿತ್ರ.ಎ, ಶಾಲೆಯ ಎಸ್‌ಡಿಎಂಸಿ ಸದಸ್ಯ ನಾಗೇಶ್ ಕೋಟೆಬಾಗಿಲು, ಅತಿಥಿ ಶಿಕ್ಷಕಿ ವೇದಾವತಿ, ಆಶಾ ಕಾರ್ಯಕರ್ತೆ ಕುಸುಮಾ ಮುಖ್ಯಅತಿಥಿಗಳಾಗಿದ್ದರು.ಕಾಲೇಜಿನ ಉಪನ್ಯಾಸಕಿಯರಾದ ಜ್ಯೋತಿ.ಪಿ.ರೈ, ಶ್ಯಾಮಿಲಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಭವ್ಯಶ್ರೀ ಹರೀಶ್ ಕುಲ್ಕುಂದ ವೇದಿಕೆಯಲ್ಲಿದ್ದರು.
ಗೌರವಾರ್ಪಣೆ:
ಸಮಾರಂಭದಲ್ಲಿ ನಿವೃತ್ತ ಯೋಧರಾದ ಮಧುಕುಮಾರ್ ಎರ್ಮಾಯಿಲ್, ಸೋಮಶೇಖರ್, ದಿವ್ಯಪ್ರಕಾಶ್ ಎರ್ಮಾಯಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಬಿರಾರ್ಥಿ ವಿಶಾಲ್ ಕಿರಣ್ ಸ್ವಾತಿಸಿದರು. ವಿದ್ಯಾರ್ಥಿನಿ ಶರಣ್ಯಾ ವಂದಿಸಿದರು. ಘಟಕದ ನಾಯಕ ಪವನ್ ಕುಮಾರ್ ನಿವೃತ್ತ ಯೋಧರನ್ನು ಪರಿಚಯಿಸಿದರು. ಶಿಬಿರಾರ್ಥಿ ಮೋಕ್ಷಿತಾ.ಎ ನಿರೂಪಿಸಿದರು.
- Thursday
- November 21st, 2024