ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ
ಸುಬ್ರಹ್ಮಣ್ಯದಿಂದ ನ.8 ಕ್ಕೆ ರೈತ ರಕ್ಷಣಾ ಚಳವಳಿ ಆರಂಭ ಮಾಡಲಿದ್ದೇವೆ ಎಂದು ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರೈತರಿಗೆ ನೆಮ್ಮದಿ ಇಲ್ಲ. ಒಂದು ಕಡೆ ಕಾಡು ಪ್ರಾಣಿಗಳ ಹಾವಳಿ, ಇನ್ನೊಂದು ಕಡೆಯಿಂದ ಅರಣ್ಯ ಇಲಾಖಾ ಅಧಿಕಾರಿಗಳ ದಬ್ಬಾಳಿಕೆ ನಡೆಯುತ್ತಿದೆ. ಲಂಚ ನೀಡಿದವನಿಗೆ ಕಂದಾಯ ಇಲಾಖೆ ಜಾಗದ ರೆಕಾರ್ಡ್ ಮಾಡಿ ಕೊಡುತ್ತದೆ. ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ರೈತರ ಜಾಗ ರೆಕಾರ್ಡ್ ಮಾಡಲು ಆ ಮನೆಯ ಮಹಿಳೆಯರನ್ನು ತಮ್ಮ ಚಟಕ್ಕೆ ಕೇಳುವ ಪರಿಸ್ಥಿತಿಯು ಒಂದೆರಡು ಗೊತ್ತಾಗಿದೆ ಎಂದು ಅವರು ಆರೋಪಿಸಿದರು. ದ.ಕ ಜಿಲ್ಲೆ ಭ್ರಷ್ಟ ಅಧಿಕಾರಿಗಳಿಂದ ತುಂಬಿದೆ. ಬ್ರೋಕರ್ ಗಳಿಂದ ತುಂಬಿದೆ. ಅಡಿಕೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರವಿಲ್ಲ ಅದಕ್ಕೆ ಪರಿಹಾರ ಒದಗಿಸಿ ಎಂದರು.
ಬೆಳ್ತಂಗಡಿಯ ಕಳೆಂಜದ ಪ್ರಕರಣದಲ್ಲಿ ಜಂಟಿ ಸರ್ವೆಗೆ ಆದೇಶವಾಗಿದೆ. ಇದೇ ಸರ್ವೆ ನಂಬರ್ ನಲ್ಲಿ ಅಲ್ಲೆರ ಹತ್ತಿರ ದೊಡ್ಡ ಮನೆ ನಿರ್ಮಾಣ ಆಗುತ್ತಿದೆ. ಆದರ ಬಗ್ಗೆ ಚಕಾರವೆತ್ತದ ಅಧಿಕಾರಿಗಳು ಮತ್ತೊಂದು ಕಡೆ ತಡೆ ಒಡ್ಡುತ್ತಾರೆ. ಉದ್ದೇಶ ಪೂರ್ವಕವಾಗಿ ಕೆಲ ಕಡೆ ತೆರವು ಮಾಡಲಾಗ್ತಿದೆ ಹೀಗೆ ಮಾಡುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ್ ಕೂಜುಗೋಡು
ಹರೀಶ್ ಬಳ್ಪ, ವಿರೇಶ್ ಪಂಜೋಡಿ ಉಪಸ್ಥಿತರಿದ್ದರು.
- Saturday
- November 23rd, 2024