ಪ್ರಸಿದ್ಧ ಚಿತ್ರಕಲಾವಿದ ಮೋಹನ ಸೋನ ಅವರ ನೆನಪು ಕಾರ್ಯಕ್ರಮವು ಇಂದು ಸಂಜೆ ಸೋಣಂಗೇರಿಯಲ್ಲಿ ನಡೆಯಲಿದ್ದು, ಅವರು ಕಲಾ ಕ್ಷೇತ್ರಕ್ಕೆ ನೀಡಿದ ಸಾಧನೆಯನ್ನು ಗೌರವಿಸಿ ಸೋಣಂಗೇರಿ ವೃತ್ತಕ್ಕೆ ಮೋಹನ್ ಸೋನರವರ ಕಲಾಚಿತ್ರ ಅಳವಡಿಸಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸೋನರವರ ಅಭಿಮಾನಿಗಳು ಒತ್ತಾಯಿಸಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋಹನ ಸೋನ ರವರ ಮಿತ್ರ ಸುದೇಶ್ ಮಹಾನ್ ಮಾತನಾಡುತ್ತಾ ಮೋಹನ್ ಸೋನರವರ ತೃತೀಯ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಸೋನ ನಿವಾಸದಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅವರು ಮೋಹನ ಸೋನ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ದೇವಾನಂದ ಗಾಂವ್ಕರ್ ಅವರ ಹಾಡುಗಳು ನಡೆಯಲಿದ್ದು, ಮೋಹನ ಸೋನ ಆರ್ಟ್ ಗ್ಯಾಲರಿಯಲ್ಲಿ ಮೋಹನ ಸೋನ ಹಾಗೂ ಕಲಾವಿದ ಸುದೇಶ್ ಮಹಾನ್ ಅವರ ಚಿತ್ರಗಳ ಪ್ರದರ್ಶನ ಹಾಗೂ ಕಲಾವಿದೆ ಆದ್ಯಾ ರಾಜೇಶ್ ಮಹಾನ್ ಅವರ ಕಲೆಗಳ ಪ್ರದರ್ಶನ ನಡೆಯಲಿದೆ. ಹಾಗೂ ಸೋಣಂಗೇರಿ ವೃತ್ತಕ್ಕೆ ಈಗಾಗಲೇ ಹಲವಾರು ಜನ ಮೋಹನ್ ಸೋನಾ ರ ಹೆಸರು ಸೂಚಿಸಿದ್ದಾರೆ. ಮೋಹನ್ ಸೋನರವರ ಹೆಸರು ವೃತ್ತಕ್ಕೆ ಅತೀ ಸೂಕ್ತವಾಗಿದೆ. ಅವರು ಕಲಾ ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಯಿಂದಾಗಿ ಇಂದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಅಲ್ಲದೇ ಸೋಣಂಗೇರಿ ಎಂಬ ಪುಟ್ಟ ಹಳ್ಳಿಯನ್ನು ದೇಶಕ್ಕೆ ತೋರಿಸಿಕೊಟ್ಟ ಮಹಾನ್ ಕಲಾವಿದ ಎಂದು ಹೇಳಿದರು . ಅಲ್ಲದೇ ಈ ರಸ್ತೆ ಮೂರು ಕಡೆಗಳಿಂದ ಸೇರುವ ಕಾರಣಕ್ಕಾಗಿ ಇಲ್ಲಿ ಪ್ರತಿಕೃತಿ ಇರಿಸಿದರೆ ಒಂದ ಕಡೆಗೆ ಬೆನ್ನು ಬೀಳುತ್ತದೆ ಈ ಹಿನ್ನಲೆಯಲ್ಲಿ ಈ ವೃತ್ತಕ್ಕೆ ಕಲಾತ್ಮಕ ಚಿತ್ರವನ್ನು ಅಳವಡಿಸಿ ಮೋಹನ್ ಸೋನರವರ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಸತ್ಯಶಾಂತಿ , ನಂದನ್ ಸೋನಾ , ಗಗನ್ ಸೋನ , ವಿಜೆತ್ ಶೆಟ್ಟಿ , ಮೃಣಾಲಿನಿ ಉಪಸ್ಥಿತರಿದ್ದರು.