ಅಲ್ ಅಮೀನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಕ ವ್ಯಸನದ ವಿರುದ್ದ ಭಾರತದಾದ್ಯ ಜನಜಾಗೃತಿ ಯಾತ್ರೆ ದಿನಾಂಕ 12-10-23ರಂದು ಪೆರಾಜೆಯಿಂದ ಪ್ರಾರಂಭವಾಗಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಉನೈಸ್ ಪೆರಾಜೆ ಹೇಳಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಇದೀಗ ನಾಡಿನೆಲ್ಲೆಡೆ ಯುವ ಜನತೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ಅಲ್ಲದೇ ಕೆಲವು ಕಡೆಗಳಲ್ಲಿ ಈ ದುಷ್ಛಟಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಇದರಿಂದ ಸಮಾಜವನ್ನು ಮುಕ್ತಿ ಹೊಂದಿಸುವ ಸಲುವಾಗಿ ಭಾರತದಾಧ್ಯಂತ ಜನ ಜಾಗೃತಿ ಯಾತ್ರೆ ಮೊದಲ ಹಂತದಲ್ಲಿ ಪೆರಾಜೆಯಿಂದ ಕನ್ಯಾಕುಮಾರಿ ಮರೆಗಿನ ಮೊದಲ ಹಂತದ ಯಾತ್ರೆಗೆ ನಾಳೆ ಚಾಲನೆ ನೀಡಲಿದ್ದೆವೆ ಎಂದು ಹೇಳಿದರು. ಅಲ್ಲದೇ ಮುಂದಿನ ದಿನಗಳಲ್ಲಿ ನಾವು ಪಶ್ಚಿಮ ಬಂಗಾಳ ತನಕ ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು ಈ ಪತ್ರಿಕಾಗೋಷ್ಠಿಯಲ್ಲಿ ಅಶ್ರಫ್ ಡಿ ಎಂ , ಲತೀಫ್ ಪಿ ಎ , ಅಬ್ದುಲ್ ರಝಾಕ್ , ಅಶ್ರಫ್ ಪಿ ಎಂ , ಇಸಾಮುದ್ದಿನ್ , ಮತ್ತಿತರರು ಉಪಸ್ಥಿತರಿದ್ದರು.