ಶಾಲಾ ಕೊಠಡಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ದುರಸ್ತಿಗೆ ತೀರ್ಮಾನ.
ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಶಾಲೆಗೆ ಶಾಸಕಿ ಕು. ಭಾಗೀರಥಿ ಮುರುಳ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಊರವರ ಮತ್ತು ತಾವು ತಾಲೂಕು ಪಂಚಾಯತ್ ಅನುದಾನ ಒದಗಿಸಿ ಕಟ್ಟಡದ ಕಾಮಗಾರಿ ನಡೆಸುವಂತೆ ಹೇಳಿದ್ದರು ಅದೇ ಮಾದರಿಯಲ್ಲಿ ದಿನಾಂಕ 08-10-2023 ರಂದು ಶಾಲೆಯ ಎಸ್ ಡಿ ಎಂ ಸಿ ಸಮಿತಿಯು ತುರ್ತು ಸಭೆ ಸೇರಿ ಕೆಲವು ನಿರ್ಣಯಗಳನ್ನು ಮಾಡಿರುವುದಾಗಿ ತಿಳಿದು ಬಂದಿದೆ.
ಅ.8ರಂದು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದರ ಅಧ್ಯಕ್ಷತೆಯಲ್ಲಿ, ಎಸ್.ಡಿ.ಎಂ.ಸಿ. ಸದಸ್ಯರು ಹಾಜಾರಾತಿಯಲ್ಲಿ ಶಾಲೆಯಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಪ್ರಮುಖವಾಗಿ 2 ವಿಚಾರಗಳ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ದಯಾನಂದರು ನಮ್ಮ ಶಾಲೆ ದುರಸ್ತಿಗೆ ಸರಕಾರದಿಂದ ಈ ಹಿಂದೆ ಮಂಜೂರಾಗಿದ್ದ ರೂ.7 ಲಕ್ಷ ಅನುದಾನ ಬಂದಿದೆಯೆಂಬ ಮಾಹಿತಿ ಇಂಜಿನಿಯರ್‌ರವರು ತಿಳಿಸಿದ್ದಾರೆ. ಈಗ ಶಾಲೆಯ 3 ಕೊಟಡಿಗಳನ್ನು ಉತ್ತಮ ರೀತಿಯಲ್ಲಿ ದುರಸ್ತಿ ಪಡಿಸುವ ಕಾರ್ಯ ಶೀಘ್ರವೇ ಮಾಡುತ್ತಾರೆ ಎಂದು ಹೇಳಿದರು ಅಲ್ಲದೇ ಪೋಷಕರ ಸಹಕಾರದೊಂದಿಗೆ ಶಾಲಾ ಮಕ್ಕಳ ಸುರಕ್ಷತೆಯನ್ನು ಕೈಗೊಳ್ಳುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದ್ದು ನಾಳೆಯಿಂದ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿದುಬಂದಿದ್ದು ಈ ತುರ್ತು ಸಭೆಯಲ್ಲಿ ಉಪಾಧ್ಯಕ್ಷೆ ನಾಗವೇಣಿ ಬಿ, ಸದಸ್ಯರುಗಳಾದ ಜಗದೀಶ ಡಿ, ಗಂಗಾಧರ ಎನ್.ಎಸ್., ಉಷಾ ಜ್ಯೊತಿ ಡಿ.ವಿ., ಜಯಲಕ್ಷ್ಮೀ ಕೆ.ಎಂ, ಮಂಜುನಾಥ ಕೆ., ಹೇಮಲತಾ ಸಿ.ಎನ್, ಭಾಸ್ಕರ ಡಿ.ಎಸ್ , ಚಂದ್ರಶೇಖರ ಡಿ.ಕೆ, ಶಾಂತಿ ಕುಮಾರಿ ಪಿ.ಆರ್ ಉಪಸ್ಥಿತರಿದ್ದರು.
ಎಂಜಿನಿಯರ್ ಮಣಿಕಂಠ ಮತನಾಡಿ ಶಾಸಕರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದಂತೆ ಶಾಲೆಯ ಗೊಡೆ ಮತ್ತು ಮೇಲ್ಚಾವಣಿ ತೆಗೆದು ಪ್ಲಿಂತ್ ಬೀಮ್ ಅಳವಡಿಸಿ ಗೊಡೆಕಟ್ಟಿ ಅದರ ಮೇಲೆ ಲಿಂಟಲ್ ಹಾಕಿ ನಂತರ ಗೋಡೆ ಮುಂದುವರೆಸಿ ಹಳೆಯ ಹಾಳಾದ ಪಕ್ಕಾಸುಗಳನ್ನು ತೆಗೆದು ಹೊಸ ಪಕ್ಕಾಸು ಅಳವಡಿಸಿ ಹಳೆಯ ಹಂಚಿನ ಮೇಲ್ಚಾವಣಿಯಲ್ಲೆ ಮಾಡಲಿದ್ದೇವೆ ಹೆಚ್ಚುವರಿಯಾಗಿ ಶಾಸಕರು ತಿಳಿಸಿದಂತೆ ತಾಲೂಕು ಪಂಚಾಯತ್ ಅನುದಾನ ದೊರಕಿದಾಗ ಅದರಲ್ಲಿ ಎಷ್ಟು ಇದೆಯೋ ಅದನ್ನು ಆಗ ಮಾಡುತ್ತೆವೆ ಈಗ ಭದ್ರವಾದ ಮಕ್ಕಳಿಗೆ ಬೇಕಾಗುವ ರೀತಿಯಲ್ಲಿ ಮೂರು ರೋಮ್ ಗಳನ್ನು ಮಾಡಲಿದ್ದೇವೆ ಎಂದು ತಿಳಿಸಿದರು.