Ad Widget

ಹರಿಹರಪಲ್ಲತ್ತಡ್ಕ : ಖ್ಯಾತ ವೈದ್ಯ ಡಾ.ಚಂದ್ರಶೇಖರ ಕಿರಿಭಾಗ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ

ಗಾಂಧಿ ಜಯಂತಿ ಪ್ರಯುಕ್ತ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಸುಳ್ಯದ ಯುವಜನ ಸೇವಾ ಸಂಸ್ಥೆ ಕೊಡ ಮಾಡುವ ಗಾಂಧಿ ಸ್ಮೃತಿ ಪ್ರಶಸ್ತಿಗೆ ಖ್ಯಾತ ವೈದ್ಯ, ಹರಿಹರಪಲ್ಲತಡ್ಕದ ಡಾ.ಚಂದ್ರಶೇಖರ ಕಿರಿಭಾಗ ಅವರು ಭಾಜನರಾಗಿದ್ದು, ಅವರಿಗೆ ಅ.7ರಂದು ಹರಿಹರಪಲ್ಲತಡ್ಕದ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹರಿಹರ ಪಲ್ಲತ್ತಡ್ಕದ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸುಳ್ಯ ಶಾಸಕರಾದ ಕು.ಬಾಗೀರಥಿ ಮುರುಳ್ಯ ಉದ್ಘಾಟನೆ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಬೋಜೇಗೌಡ ಡಾ| ಚಂದ್ರಶೇಖರ ಕಿರಿಭಾಗ ಮತ್ತು ಹರ್ಷಮ್ಮ ದಂಪತಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು. ವಿಶ್ರಾಂತ ಪ್ರಾಂಶುಪಾಲರಾದ ಪ್ರಭಾಕರ ಕಿರಿಭಾಗ ಗಾಂಧಿ ಸ್ಮೃತಿ ಹಾಗೂ ಅಭಿನಂದನಾ ಭಾಷಣ ಮಾಡಿದರು. ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪ್ರವೀಣ್ ಕುಮಾರ್.ಎ.ಎಂ, ಯುವಜನ ಸೇವಾ ಸಂಘದ ಅಧ್ಯಕ್ಷರಾದ ದೀಪಕ್ ಕುತ್ತಮೊಟ್ಟೆ, ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ್ಕ ಇದರ ಅಧ್ಯಕ್ಷರಾದ ಪ್ರದೀಪ್ ಕಜ್ಜೋಡಿ, ಯುವಜನ ಸೇವಾ ಸಂಸ್ಥೆಯ ಶೈಲೇಶ್ ಅಂಬೆಕಲ್ಲು, ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಕಾರ್ಯಕ್ರಮದ ಉಸ್ತುವಾರಿ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.
ಮೀರಾ ಭಜನ್ ಕಾರ್ಯಕ್ರಮದೊಂದಿಗೆ ಸಮಾರಂಭವು ಪ್ರಾರಂಭಗೊಂಡಿತು. ರಾಜೇಶ್ವರಿ, ಈಶ್ವರಿ, ಅಂಬಿಕಾ ಪ್ರಾರ್ಥಿಸಿದರು. ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ್ ಕುಮಾರ್ ವಂದಿಸಿದರು. ಗುರುರಾಜ್ ಅಜ್ಜಾವರ ಕಾರ್ಯಕ್ರಮ ನಿರೂಪಣೆ ಮಾಡಿದರು.

. . . . . . . . .

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading