ರಾಮಕೃಷ್ಣ ಕೊಲೆ ಪ್ರಕರಣದ ಹೈಕೋರ್ಟ್ ತೀರ್ಪನಿಂದ ಡಾ.ರೇಣುಕಾಪ್ರಸಾದ್ ಅವರಿಗೆ ಶಿಕ್ಷೆ ಘೋಷಣೆಯಾದ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ರೇಣುಕಾಪ್ರಸಾದ್ ಪತ್ನಿ ಜ್ಯೋತಿ ಆರ್ ಪ್ರಸಾದ್ ಪತ್ರಿಕಾಗೋಷ್ಠಿ ನಡೆಸಿ ಅಕಾಡೆಮಿ ಅಧ್ಯಕ್ಷರ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ರವರು ಕೂಡ ಪತ್ರಿಕಾಗೋಷ್ಠಿ ಕರೆದು ತನ್ನ ಮೇಲಿನ ಆರೋಪ ಅಲ್ಲಗಳೆದಿದ್ದಾರೆ. ಉದ್ಯೋಗಿಗಳಿಗೆ ಯಾವುದೇ ರೀತಿಯ ದಬ್ಬಾಳಿಕೆ ಮಾಡಿರುವುದಿಲ್ಲ ಹಾಗೂ ಒತ್ತಡವನ್ನು ನೀಡಿರುವುದಿಲ್ಲ. ಕಾನೂನು ತಿಳಿದು ಮಾತನಾಡಬೇಕು. ಸುಖಾ ಸುಮ್ಮನೆ ಆರೋಪ ಮಾಡಬಾರದು. ಸುಳ್ಯದಲ್ಲಿ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರು ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇದರ ಕಾರ್ಯವ್ಯಾಪ್ತಿಯಲ್ಲಿ ಶಿಕ್ಷಣ ವಂಚಿತರಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕೆಜಿಯಿಂದ ಪಿಜಿಯವರೆಗೆ ಸಾಮಾನ್ಯ, ತಾಂತ್ರಿಕ, ಪ್ಯಾರಮೆಡಿಕಲ್, ಆಯುವೇದ, ದಂತ ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿದಿ ಶಿಕ್ಷಣಕಾತಿಯನ್ನಾಗಿ ಪರಿವರ್ತಿಸಿದರು. ಅವರು ನಿಧನರಾದ ನಂತರ ಡಾ ಕೆ.ವಿ. ಚಿದಾನಂದರವರ ಅಧ್ಯಕ್ಷತೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಆಕಾಡೆಮಿ ಆಫ್ ಲಿಬಿರ ವಿದ್ಯುಕೇಶನ್ (ರಿ.). ಸುಳ್ಯ ಇದರ ಅಡಿಯಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಆದರೆ ನಮ್ಮ ಸಂಸ್ಥೆಯ ಒರ್ವ ಸದಸ್ಯರಾದ ಡಾ. ರೇಣುಕಾ ಪ್ರಸಾದ್ ಕೆ. ವಿ. ಇವರು ನಮ್ಮ ಕೆಜಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಕೆ.ವಿಜಿ ಪಾಲಿಟೆಕ್ನಿಕ್ ನ ಮಾಜಿ ಪ್ರಾಂಶುಪಾಲರಾಗಿದ್ದ ಪ್ರೊ. ರಾಮಕೃಷ್ಣ, ಎ. ಎಸ್. ಅವರ ಕೊಲೆ ಕೇಸಿನಲ್ಲಿ ದಿನಾಂಕ 27,09,2023ರಂದು ಮಾನ್ಯ ಉಚ್ಚನ್ಯಾಯಲಯವು ಜೀವಾವಧಿ ಶಿಕ್ಷೆಯನ್ನು ಆದೇಶಿಸಿದೆ. ಹಾಗೇ ಆ ಪ್ರಕಾರ ನಮ್ಮ ಸಂಘದ ಸಭೆಯ ನಿರ್ಣಯದ ಪ್ರಕಾರ ಎಲ್ಲಾ ಸಂಸ್ಥೆಗಳು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ವ್ಯಾಪ್ತಿಗೆ ಬರುವುದರಿಂದ ಈ ವಿದ್ಯಾಸಂಸ್ಥೆಗಳ, ವಿದ್ಯಾರ್ಥಿಗಳ, ಉದ್ಯೋಗಿಗಳು ಹಾಗೂ ಸಂಸ್ಥೆಯ ಭವಿಷ್ಯದ ಹಿತದೃಷ್ಟಿಯಿಂದ ಯಾವುದೇ ತೊಂದರೆಗಳು ಬಾರದಂತೆ ಹಾಗೂ ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಆ ಪ್ರಯುಕ್ತ ಪ್ರಥಮ ಹಂತದಲ್ಲಿ ಕೌನ್ನಿಲ್ ಸದಸ್ಯರು ಕೆ.ವಿ.ಜಿ ಪಾಲಿಟೆಕ್ನಿಕ್‌ಗೆ ದಿನಾಂಕ 06- 10 -2023ರಂದು ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲರ ಜೊತೆಗೆ ಸಂಸ್ಥೆಯ ಪ್ರಗತಿಯ ಬಗ್ಗೆ ಚರ್ಚಿಸಿದ್ದೇವೆ. ಹಾಗೂ ಈ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ಉತ್ತಮವಾಗಿ ನಡೆಸಿಕೊಂಡು ಬರಲು ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಹಾಗೂ ಇತ್ತಿಚೆಗೆ ನಡೆದ ವಿದ್ಯಾಮಾನಗಳ ಬಗ್ಗೆ ಚರ್ಚಿಸಲಾಯಿತು. ಭೇಟಿ ನೀಡಿದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಯಾವುದೇ ರೀತಿಯ ದಬ್ಬಾಳಿಕೆ ಮಾಡಿರುವುದಿಲ್ಲ ಹಾಗೂ ಒತ್ತಡವನ್ನು ನೀಡಿರುವುದಿಲ್ಲ. ಈ ಸಭೆಯಲ್ಲಿ ಕೇವಲ ಸಂಸ್ಥೆಯ ಹಿತದೃಷ್ಟಿಯನ್ನು ಕಾಪಾಡುವ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಹೇಳಿದರು. ನಮ್ಮದು ಸೊಸೈಟಿ ಆಕ್ಟ್ ಪ್ರಕಾರ 9 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಡಾ. ರೇಣುಕಾ ಪ್ರಸಾದ್ , ಡಾ. ಜ್ಯೋತಿ ಆರ್ ಪ್ರಸಾದ್ , ಅಭಿಜ್ಞಾ ನಮ್ಮ ವಾರ್ಷಿಕ ಮಹಾಸಭೆಗೆ ಗೈರು ಹಾಜರಾಗಿದ್ದು ಆದ್ದರಿಂದ ಅವರು ಇದೀಗ ನಮ್ಮ ಸಂಘದ ಸದಸ್ಯರಾಗಿ ಮಾತ್ರ ಇದ್ದಾರೆ ಅಲ್ಲದೇ ಇದೀಗ ನ್ಯಾಯಾಲಯದ ಆದೇಶದ ಪ್ರಕಾರ ಡಾ. ರೇಣುಕಾ ಪ್ರಸಾದ್ ರವರು ಸಮಿತಿಯ ಸದಸ್ಯತನದಿಂದ ಅನರ್ಹರಾಗಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶೋಭಾ ಚಿದಾನಂದ , ಅಕ್ಷಯ್ ಕೆ ಸಿ , ಡಾ. ಐಶ್ವರ್ಯ , ಹೇಮನಾಥ್ ಕುರುಂಜಿ , ನ್ಯಾಯವಾದಿಗಳಾದ ಪ್ರದೀಪ್ ಕೆ. ಮತ್ತಿತರರು ಉಪಸ್ಥಿತರಿದ್ದರು.