ಅಜ್ಜಾವರ ಗ್ರಾಮದ ಕಾಂತಮಂಗಲ ಪಯಸ್ವಿನಿ ನದಿ ಪಕ್ಕದಲ್ಲಿ ಕಸ ಎಸೆಯಲು ಬಂದ ಯುವಕನನ್ನು ಸ್ಥಳೀಯರು ಹಿಡಿದು ಪೋಲೀಸರಿಗೊಪ್ಪಿಸಿದ್ದ ಘಟನೆ ಗಾಂಧಿ ಜಯಂತಿ ದಿನವಾದ ಅ 2 ರಂದು ನಡೆದಿತ್ತು ಇದೀಗ ಕಸ ಎಸೆದ ವ್ಯಕ್ತಿಗೆ ಅಜ್ಜಾವರ ಗ್ರಾ.ಪಂ. 10 ಸಾವಿರ ರೂ ದಂಡ ವಿಧಿಸಿರುವ ಘಟನೆ ವರದಿಯಾಗಿದೆ.
ಅ.2 ರಂದು ರಾತ್ರಿ ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂತಮಂಗಲದಲ್ಲಿ ಪಯಸ್ವಿನಿ ನದಿಯ ಬಳಿಯಲ್ಲಿ ಬೈಕ್ ನಲ್ಲಿ ಆರಿಸ್ ಪಾಣಾಜೆ ಎಂಬವರು ಕಸ ತುಂಬಿದ ಕವರೊಂದನ್ನು ಹಿಡಿದು ಅಬ್ದುಲ್ ಖಾದರ್ ಎಂಬುವವರ ಬೈಕ್ ನಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ನದಿಗೆ ಎಸೆಯಲೆತ್ನಿಸಿದಾಗ ಆ ದಾರಿಯಾಗಿ ಬಂದ ಮಹೇಶ್ ರೈ ಮೇನಾಲರು ಆತನನ್ನು ಪ್ರಶ್ನಿಸುತ್ತಿದ್ದಾಗ ಅದೇ ದಾರಿಯಲ್ಲಿ ಬರುತ್ತಿದ್ದ ಗುರುದತ್ ನಾಯಕ್, ಮನೋಜ್ ರೈ, ಡಾ. ನಿತೀನ್ ಪ್ರಭು, ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಪಂಚಾಯತ್ ಸಿಬ್ಬಂದಿ ಕಾರ್ತಿಕ್ ರವರಿಗೆ ವಿಷಯ ತಿಳಿದು ಎಲ್ಲರೂ ಪ್ರಶ್ನಿಸ ತೊಡಗಿ ಬಳಿಕ ಬೈಕ್ ನಲ್ಲಿ ಕಸ ತಂದ ವ್ಯಕ್ತಿಯನ್ನು ರಾತ್ರಿಯೇ ಪೋಲೀಸರಿಗೊಪ್ಪಿಸಲಾಯಿತು.
ಠಾಣೆಯಲ್ಲಿ ಬೈಕ್ ಇರಿಸಿಕೊಂಡು ಆತನಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಯಿಸಿ ಕಳುಹಿಸಲಾಯಿತೆಂದು ತಿಳಿದುಬಂದಿದೆ.ಅ.4 ರಂದು ಅಜ್ಜಾವರ ಗ್ರಾ.ಪಂ.ನವರು ಕಸ ಎಸೆದ ವ್ಯಕ್ತಿಯನ್ನು ಗ್ರಾ.ಪಂ. ಗೆ ಕರೆಸಿ, ವಿಚಾರಿಸಿ ರೂ.10 ಸಾವಿರ ದಂಡ ಹಾಕಿದರೆಂದು ತಿಳಿದುಬಂದಿದೆ. ದಂಡದ ರಶೀದಿ ಪಡೆದ ಆ ವ್ಯಕ್ತಿ ಠಾಣೆಗೆ ಕೊಂಡೊಯ್ದು ಅಬ್ದುಲ್ ಖಾದರ್ ಎಂಬುವವರ ಬೈಕ್ ನ್ನು ಬಿಡಿಸಿ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಇವೆಲ್ಲದರ ಮಧ್ಯೆ ಗ್ರಾಮ ಪಂಚಾಯತ್ ಯಾರಲ್ಲಿನ ಕಸ ಆರಿಸ್ ಪಾಣಜೆ ಎಲ್ಲಿ ಕೆಲಸ ಮಾಡುತ್ತಿದ್ದ ಯಾರ ಹೋಟೆಲ್ ತ್ಯಾಜ್ಯ ಎಂಬೆಲ್ಲಾ ಪ್ರಶ್ನೆಗಳು ಉದ್ಬವಿಸಿದ್ದು ಗ್ರಾಮ ಪಂಚಾಯತ್ ಸದಸ್ಯರು ಯಾವ ಕಾರಣಕ್ಕಾಗಿ ದಂಡದ ಮೊತ್ತ ಐದು ಸಾವಿರ ಮಾಡಬೇಕು ಎಂದು ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದರು ? ಇದರ ಮಧ್ಯೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯರಾಮ ಅತ್ಯಡ್ಕ ಇವರ ಬಿಗಿ ಪಟ್ಟಿನ ಹಿನ್ನಲೆಯಲ್ಲಿ ಇದೀಗ ಹತ್ತು ಸಾವಿರ ದಂಡ ವಿಧಿಸಿದ್ದು ಇತ್ತ ತ್ಯಾಜ್ಯ ಸುರಿದವರ ಪರವಾಗಿ ಕೆಲವರು ನಿಲ್ಲುತ್ತಿದ್ದು
ಎಲ್ಲವು ಕುತೂಹಲ ಮೂಡಿಸಿದ್ದು ಇದರ ಬೆನ್ನಲ್ಲೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯ ಭಾವಚಿತ್ರಗಳುಳ್ಳ ಒಂದು ಲೋಡ್ ತ್ಯಾಜ್ಯವು ರಸ್ತೆಯ ಪಕ್ಕದಲ್ಲಿ ಸುರಿದಿದ್ದರು ಇದನ್ನು ಇಲ್ಲಿಯ ತನಕ ಪತ್ತೆ ಹಚ್ಚುವ ಕೆಲಸವನ್ನು ಗ್ರಾಮ ಪಂಚಾಯತ್ ಮಾಡಿಲ್ಲಾ ಅಲ್ಲದೇ ತ್ಯಾಜ್ಯ ಎಸೆದವರ ಹೆಸರು ಮತ್ತು ಅವರ ವಿರುದ್ದ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತ್ ಮೀನಾವೇಷ ಎಣಿಸುತ್ತಿರುವುದು ಮಾತ್ರ ಶೋಚನೀಯವಾಗಿದೆ ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದು ಇನ್ನಾದರು ಎಚ್ಚೆತ್ತುಕೊಳ್ಳುವುದೇ ಗ್ರಾಮ ಆಡಳಿತ ಎಂದು ಕಾದು ನೋಡಬೇಕಿದೆ.
ಒಂದು ಲೋಡ್ ತ್ಯಾಜ್ಯ ಸುರಿದ ವ್ಯಕ್ತಿ ಯಾರು ?
ಇತ್ತ ಒಂದು ಲೋಡ್ ತ್ಯಾಜ್ಯವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುರಿಯಲಾಗಿದ್ದು ಇತ್ತ ಆಮ್ ಆದ್ಮಿ ಪಕ್ಷದ ನಾಯಕರಾದ ಕಲಂದರ್ ಗ್ರಾಮ ಪಂಚಾಯತ್ ಕಛೇರಿಗೆ ಆಗಮಿಸಿ ತ್ಯಾಜ್ಯ ಎಸೆದವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು ಇತ್ತ ಗ್ರಾಮ ಪಂಚಾಯತ್ ಅವರಿಗೆ ಸಬೂಬು ನೀಡಿ ಕಳುಹಿಸಲಾಗಿದ್ದು ಇದರ ವಿರುದ್ದ ಕ್ರಮ ಕೈಗೊಂಡಿಲ್ಲಾ ಯಾರು ತ್ಯಾಜ್ಯ ಎಸೆದಿದ್ದಾರೆ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅಮ್ ಅದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಲಂದರ್ ತಿಳಿಸಿದ್ದಾರೆ.
ಹೆಸರಿಗೆ ಸೋಲಾರ್ ಆಧಾರಿತ ಸಿಸಿಟಿವಿ , ಸಿಸಿಟಿವಿ ಚಿತ್ರಗಳು ಖಾಲಿ.
ಇತ್ತ ಕಾಂತಮಂಗಲ ಬಳಿಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸಿಸಿಟಿವಿ ಅಳವಡಿಕೆ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿದ್ದು ಇದೀಗ ಗ್ರಾಮ ಪಂಚಾಯತ್ ಅಳವಡಿಸಿದ ಸಿಸಿಟಿವಿಯಲ್ಲಿ ಯಾವುದೇ ಚಿತ್ರಗಳು ಸಿಗುತ್ತಿಲ್ಲಾ ಮತ್ತು ಅದು ನಾ ದುರಸ್ತಿಯಲ್ಲಿದೆ ಎಂದು ಹೇಳುತ್ತಿದೆ ಗ್ರಾಮ ಪಂಚಾಯತ್ , ಅಲ್ಲದೇ ತ್ಯಾಜ್ಯವನ್ನು ಸುರಿದವರಿಗೆ ದಂಡ ವಿಧಿಸಲಾಗಿಗೆ ನಾವು ಬೇಕಿದ್ದರೆ ಗ್ರಾಮ ಸಭೆಯಲ್ಲಿ ಇದನ್ನು ಹೇಳುತ್ತೆವೆ ಎಂದು ಗ್ರಾಮ ಪಂಚಾಯತ್ ಮೂಲಗಳು ಹೇಳುತ್ತಿದ್ದು ತ್ಯಾಜ್ಯ ಎಸೆಯುವವರ ವಿರುದ್ದ ಇನ್ನಾದರು ಎಚ್ಚೆತ್ತು ತ್ಯಾಜ್ಯ ಸುರಿದವರನ್ನು ಪತ್ತೆ ಹಚ್ಚಲು ಕ್ರಮ ವಹಿಸುವುದೇ ಎಂದು ಕಾದು ನೋಡಬೇಕಿದೆ.