ಸುಬ್ರಹ್ಮಣ್ಯ : ರಾಷ್ಟ್ರೀಯ ವಿಚಾರಧಾರೆಯೇ ಬಿಜೆಪಿಯ ಪ್ರಮುಖ ಧ್ಯೇಯ. ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಮಾಡಿ ಎಲ್ಲಾ ದೇಶಗಳ ಜತೆ ಭಾರತರ ಬೆಳವಣಿಗೆ ಕುರಿತು ಪ್ರಯತ್ನಶೀಲರಾಗಿದ್ದು, ಭಾರತ ದೇಶವನ್ನು ವಿಶ್ವದ ಎದುರು ತಲೆಎತ್ತುವಂತೆ ಮಾಡಿದ್ದಾರೆ ಎಂದು ದ.ಕ.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.ಅವರು ಅ.4ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಬಿಜೆಪಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ಮತ್ತು ಸುಳ್ಯ ತಾಲೂಕಿನ BLA-2 ಕಾರ್ಯಾಗಾರ -ಮತದಾರರ ಚೇತನ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಸಭಾ ಕಾರ್ಯಕ್ರಮದ ಬಳಿಕ ಕಾರ್ಯಾಗಾರ ನಡೆಸಿಕೊಟ್ಟ ದ.ಕ.ಬಿಜೆಪಿ ಮತದಾರರ ಚೇತನ ಅಭಿಯಾನದ ಪ್ರಮುಖ್‌ದೇವದಾಸ್‌ಶೆಟ್ಟಿ ಬಂಟ್ವಾಳ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ,ಮೌಲ್ಯಾಧಾರಿತ ರಾಜಕಾರಣ ಬಿಜೆಪಿಯ ಆದ್ಯತೆ.ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗ್ಯಾರಂಟಿಯ ಪ್ರಭಾವ ಬೀರಿದೆ.ಆದರೆ ಸುಳ್ಯ ಕ್ಷೇತ್ರದಲ್ಲಿ ಮತದಾರರು ಯಾವುದೇ ಗ್ಯಾರಂಟಿಗೆ ಒಳಗಾಗದೇ ಮತಚಲಾಯಿಸಿದ್ದಾರೆ.ನಾಯಕರ ಹಾಗೂ ಕಾರ್ಯಕರ್ತರ ಪ್ರಯತ್ನದಿಂದ ಅತ್ಯಧಿಕ ಮತಗಳು ಬಂದಿದೆ. ಮತಗಟ್ಟೆ ಸಮಿತಿ ಅಂದರೆ ಬೂತ್‌ಸಮಿತಿ ಸಕ್ರೀಯರಾಗಿದ್ದರೆ ಮತದಾರರನ್ನು ಸದಾ ಜಾಗೃತ ಸ್ಥಿತಿಯಲ್ಲಿ ಇಡಲು ಸಾಧ್ಯ ಎಂದರು.ಸಮಾರೋಪ ಭಾಷಣ ಮಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸಾಮಾನ್ಯ ಕಾರ್ಯಕರ್ತನನ್ನೂ ನಾಯಕನಾಗಿ ಬೆಳೆಸುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 2 ತಾಲೂಕಿಗಳಿದ್ದು ,ಕಡಬ ಹಾಗೂ ಸುಳ್ಯ ತಾಲೂಕು ನನ್ನ ಎರಡು ಕಣ್ಣುಗಳಿದ್ದಂತೆ. ಎರಡೂ ತಾಲೂಕುಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ,ವೆಂಕಟ್ ವಳಲಂಬೆ,ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ,ಕಾರ್ಯದರ್ಶಿ ಮುಳಿಯ ಕೇಶವ ಭಟ್ ,ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ , ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಉಪಸ್ಥಿತರಿದ್ದರು.ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿದರು.ಕಾರ್ಯದರ್ಶಿ ಪ್ರಕಾಶ್ ಎನ್.ಕೆ. ವಂದಿಸಿದರು.ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ ,ಸುಬೋದ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.
- Friday
- November 1st, 2024