
ಪಂಜ ಲಯನ್ಸ್ ಕ್ಲಬ್ ವತಿಯಿಂದ ಕುಟುಂಬ ಸಮ್ಮಿಲನ, ಸೇವಾ ಚಟುವಟಿಕೆ, ಸನ್ಮಾನ, ಗೌರವಾರ್ಪಣೆ ಕಾರ್ಯಕ್ರಮ ಅ.1 ರಂದು ಲ|ಸಂತೋಷ್ ಜಾಕೆಯವರ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂತೀಯ 7ರ ಪ್ರಾಂತೀಯ
ಅಧ್ಯಕ್ಷೆ ಲl ರೇಣುಕಾ ಸದಾನಂದ ಜಾಕೆ MJF ಅವರು ಅತಿಥಿಯಾಗಿ ಭಾಗವಹಿಸಿ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸೀರೆ ವಿತರಿಸಿದರು, ಹಾಗೂ ಕ್ರೀಡೆ, ಓದು, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಕ್ಲಬ್ಬಿನ ಸದಸ್ಯರ ಮಕ್ಕಳನ್ನ ಗೌರವಿಸಿದರು. ಹಿರಿಯರಾದ ಹಾಗೂ ಈ ದಿನದ ಆತಿತ್ಯವನ್ನು ನೀಡಿದ ಶ್ರೀಮತಿ ಇಂದುಮತಿ ವಾಸುದೇವ ಗೌಡ ಜಾಕೆ ಯವರನ್ನ ಸನ್ಮಾನಿಸಲಾಯಿತು, ಲಯನ್ಸ್ ಕ್ಲಬ್ ನ ಎಲ್ಲ ಸದಸ್ಯರು ತಮ್ಮ ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲl ದಿಲೀಪ್ ಬಾಬ್ಲು ಬೆಟ್ಟು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪ್ರಾoತೀಯ ಅಧ್ಯಕ್ಷರಾದ ಲl ರೇಣುಕಾ ಸದಾನಂದ ಜಾಕೆ MJF, ಲl ನೇ ಮಿರಾಜ ಪಲ್ಲೋಡಿ, ವಲಯಾ ಧ್ಯಕ್ಷ ಲl ಸಂತೋಷ್ ಜಾಕೆ, ಕಾರ್ಯದರ್ಶಿ ಲl ವಾಸುದೇವ ಮೇಲ್ಪಡಿ, ಕೋಶಾಧ್ಯಕ್ಷ ಲl ಆನಂದ ಗೌಡ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರಾದ ಲl ತುಕಾರಾಂ ಏನೆಕಲ್ಲು ಸ್ವಾಗತಿಸಿ, ಲl ಮನು ತೊಂಡಚ್ವನ್ ವಂದಿಸಿದರು.
