ಸುಳ್ಯದ ಅಜ್ಜಾವರ ಗ್ರಾಮದಲ್ಲಿ ಪ್ರತಿ ನಿತ್ಯ ಒಂದಲ್ಲಾ ಒಂದು ಕಡೆಯಲ್ಲಿ ತ್ಯಾಜ್ಯ ಎಸೆಯುತ್ತಿದ್ದು ರಸ್ತೆಯ ಬದಿಗಳಲ್ಲಿ ಗಬ್ಬು ನಾರುತ್ತಿದ್ದವು ಇದರ ಬಗ್ಗೆ ಸ್ಥಳೀಯರು ಈ ಹಿಂದಿನಿಂದಲು ಪೋಲಿಸ್ ಮತ್ತು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದರು.
ಇತ್ತ ಇಂದು ರಾತ್ರಿ KA 21 L 7352 ಎಂಬ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯು ಕಾಂತಮಂಗಲ ಪಯಸ್ವಿನಿ ಸೇತುವೆ ಬಳಿಯಲ್ಲಿ ಕಸ ಎಸೆಯುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ತಿಳಿದುಬಂದಿದ್ದು ಇದೀಗ ಈತನನ್ನು ಸ್ಥಳೀಯರು ಫೋಲಿಸ್ ರಿಗೆ ಹಸ್ತಾಂತರಿಸಿದ್ದರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ , ಸುಳ್ಯ ಪಶು ವೈಧ್ಯಾಧಿಕಾರಿ ನಿತಿನ್ ಪ್ರಭು , ಬಿಜೆಪಿ ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಗುರುದತ್ತ್ ಗ್ರಾಮ ಪಂಚಾಯತ್ ಸಿಬ್ಬಂದಿ ಕಾರ್ತಿಕ್ , ಮಹೇಶ್ ರೈ , ಮನೋಜ್ ರೈ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಗ್ರಾಮ ಪಂಚಾಯತ್ ಮತ್ತು ಅರಣ್ಯ ಇಲಾಖೆ ಮೇದಿನಡ್ಕ ಬಳಿಯಲ್ಲಿ ಸುರಿದ ಒಂದು ಲೋಡ್ ಕಸದ ಕುರಿತು ಇನ್ನಾದರು ಎಚ್ಚೆತ್ತು ಕ್ರಮ ಕೈಗೋಳ್ಳುವುದೇ ಎಂದು ಕಾದು ನೋಡಬೇಕಿದೆ.