Ad Widget

ಮಹಾತ್ಮರ ತತ್ವಾದರ್ಶಗಳ ಅನುಕರಣೆಯೆ ಅವರಿಗೆ ಸಲ್ಲಿಸುವ ಗೌರವ : ಸೋಮಶೇಖರ ನಾಯಕ್

ಚಳುವಳಿ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮುಂಚೂಣಿಯಲ್ಲಿದ್ದ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹುದ್ದೂರ ಶಾಸ್ತ್ರಿ ಈ ಎರಡು ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ದೊಡ್ಡ ಗೌರವ. ಅವಳಿ ಶ್ರೇಷ್ಟ ನಾಯಕರ ಜನುಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.ಇಬ್ಬರನ್ನು ನಾವು ಮರೆಯುವಂತಿಲ್ಲ.ಒಬ್ಬರು ಮಹಾತ್ಮ ಎನಿಸಿದರೆ ಇನ್ನೊಬ್ಬರು ಉಕ್ಕಿನ ಮನುಷ್ಯ. ಒಬ್ಬರು ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ‍್ಯ ತಂದರೆ ಇನ್ನೊಬ್ಬರು ಸಂಘಟನೆ ಮೂಲಕ ದೇಶವನ್ನು ಅಭ್ಯುದಯಗೊಳಿಸಿದರು ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಗಾಂಧಿ ಜಯಂತಿ ಆಚರಣೆಯಲ್ಲಿ ಅವರು ಮಹಾತ್ಮರ ಗುಣಗಾನ ಮಾಡಿದರು.ಯುವ ಜನಾಂಗ ಮಹಾತ್ಮರ ಆದರ್ಶ ಪಾಲನೆಯನ್ನು ಮಾಡಿ ಸಂಸ್ಕಾರಯುತ ವ್ಯಕ್ತಿಗಳಾಗಿ ಮೂಡಿ ಬರಬೇಕು ಎಂದರು.
ಆರಂಭದಲ್ಲಿ ಮಹಾತ್ಮ ಗಾಂಧಿಜಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹುದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಸರ್ವರೂ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್, ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಗಿರೀಶ್ ಸೇರಿದಂತೆ ಉಪನ್ಯಾಸಕರು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಈ ವೇಳೆ ಶಿಕ್ಷಕ ಮತ್ತು ಕಲಾವಿದ ರಘು ಬಿಜೂರು ರಘುಪತಿ ರಾಘವ ಗೀತೆಯನ್ನು ಹಾಡಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!