ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿಗೆ ನೌಕರರ ಸಂಘವು ಯನ್. ಎಚ್. ಯಂ. ಒಳಗುತ್ತಿಗೆ ನೌಕರರನ್ನು ಕಾಯಂ ಮಾಡಲು ದಿನಾಂಕ 13/02/2023 ರಿಂದ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಮುಷ್ಕರ ನಡೆಸುತ್ತಿದ್ದು, ಸುಳ್ಯ ತಾಲೂಕಿನ ಆರೋಗ್ಯ ಇಲಾಖೆಯ ಯನ್. ಎಚ್. ಯಂ ಸಿಬ್ಬಂದಿಗಳು ಕರ್ತವ್ಯಕೆ ಗೈರು ಹಾಜರಾಗಿ ಮುಷ್ಕರ ನಡೆಸುತ್ತಿದ್ದಾರೆ. ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಕಛೇರಿಯ 10, ತಾಲೂಕಿನ ಎಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದ 49 ಸಮುದಾಯ ಆರೋಗ್ಯ ಅಧಿಕಾರಿಗಳು, ತಾಲೂಕು ಆಸ್ಪತ್ರೆಯ 16, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ 1 ಯನ್. ಎಚ್. ಯಂ ಒಳಗುತ್ತಿಗೆ ಸಿಬ್ಬಂದಿಗಳು ದಿನಾಂಕ 01/03/2023 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಹೆಚ್ಚಿನ ಸಿಬ್ಬಂದಿಗಳು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ಕೈಗೊಂಡಿದ್ದಾರೆ. ದಿನಾಂಕ 01/03/2023 ರಂದು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಆರೋಗ್ಯ ಇಲಾಖೆ ಕಮಿಷನರ್ ಮತ್ತು ಯನ್. ಎಚ್. ಯಂ. MD ಪ್ರತಿಭಟನಾ ಸ್ಥಳಕ್ಕೆ ಬಂದಿದ್ದು ಬೇರೆ 5 ರಾಜ್ಯಗಳಲ್ಲಿ ಕಾಯಂ ಮಾಡಿರುವ ವರದಿ ತರಿಸಲಾಗಿದ್ದು ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ತಿಳಿಸಿದ್ದು ಮುಷ್ಕರ ಮುಂದುವರಿಯುತ್ತಿದ್ದೂ ನೌಕರರು ಖಾಯಂಮಾತಿ ಆದೇಶಕ್ಕೆ ಪಟ್ಟು ಹಿಡಿದಿದ್ದಾರೆ.
- Friday
- November 22nd, 2024