Ad Widget

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ.ಅನುರಾಧಾ ಕುರುಂಜಿಯವರ ಸ್ವಾತಂತ್ರ್ಯ ನಂತರ ಪ್ರಾದೇಶಿಕ ಭಾಷೆಗಳ ಬೆಳವಣಿಗೆ ಕುರಿತಭಾಷಣದ ಸರಣಿ ಕಾರ್ಯಕ್ರಮ ಮಂಗಳೂರು ಆಕಾಶವಾಣಿಯಲ್ಲಿ 25.03.2023 ಹಾಗೂ 31.03.2023 ರಂದು ಬೆಳಿಗ್ಗೆ 6.45ಕ್ಕೆ ಪ್ರಸಾರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಇವರ ಭಾಷಣ, ಕವನ, ಅರೆಭಾಷೆ ಕಾರ್ಯಕ್ರಮಗಳು ಈ ಹಿಂದೆ ಮಂಗಳೂರು ಹಾಗೂ...

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವ ಅಧ್ಯಕ್ಷರು ,ರಾಜಾರಾಮ ಕೀಲಾರು,ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಕುಮಾರ್ ಚೆದ್ಕಾರ್ ಆಡಳಿತ ಮಂಡಳಿಯ ಕಾಯ೯ದಶಿ೯ ಕೇಶವ ಚೌಟಾಜೆ,ಕೆ.ಜಿ.ಗೋಪಾಲಕೃ ಷ್ಣ ಭಟ್ ,ನಾರಾಯಣ ಭಟ್,ಕೊಂದಲಕಾಡು,ಬಿ.ಕೆ.ಆನಂದ,ಡಿ.ಯಸ್.ಬಾಲಕೃಷ್ಣ.ಹೇಮಾವತಿ ಪುರುಷೋತಮ , ಪಯಸ್ವಿನಿ ಯುವಕ ಸಂಘ ಸದಸ್ಯರುಗಳು ವಿಜಯಕುಮಾರ್ ಕನ್ಯಾನ ಲೋಹಿತ್ ಹೊದ್ದೆಟ್ಟಿ...
Ad Widget

ಶ್ರೀಮತಿ ರಶ್ಮಿ ಕೆ.ಎಂ.ಯವರಿಗೆ ಹಿರಿಯ ಸಹಾಯಕ ನಿರ್ದೇಶಕರಾಗಿ ಮುಂಬಡ್ತಿ

ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ರಶ್ಮಿ ಕೆ.ಎಂ.ರವರು ಮುಂಬಡ್ತಿ ಹೊಂದಿ ಮಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಿರಿಯ ಸಹಾಯಕ ನಿರ್ದೇಶಕರಾಗಿ ನಿಯೋಜನೆಗೊಂಡಿರುತ್ತಾರೆ. 2006ರಿಂದ 2019ರ ತನಕ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು 2017ರಲ್ಲಿ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಶು ಅಭಿವೃದ್ಧಿ ಅಧಿಕಾರಿಯಾಗಿ...

ಹಿಂದೂಸ್ತಾನೀ ತಬಲ ಜ್ಯೂನಿಯರ್ ಪರೀಕ್ಷೆ
ರಂಗಮನೆಯ ಮನುಜ ನೇಹಿಗ ಪ್ರಥಮ ಶ್ರೇಣಿ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿರುವ ಹಿಂದೂಸ್ತಾನೀ ತಬಲ ಜ್ಯೂನಿಯರ್ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ, ಸುಳ್ಯ ರಂಗಮನೆಯ ಮನುಜ ನೇಹಿಗ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾನೆ.ಯಕ್ಷಗಾನ,ನಾಟಕ,ಜಾದೂ,ಹಾರ್ಮೋನಿಯಂ,ತಬಲ,ಮಣಿಪುರಿ ಸ್ಟಿಕ್ ಡ್ಯಾನ್ಸ್ ಇತ್ಯಾದಿಯಾಗಿ ಬಹುಮುಖ ಪ್ರತಿಭೆ ಹೊಂದಿರುವ ಈತ ಆರಂಭದಲ್ಲಿ ಆಳ್ವಾಸ್ ನಲ್ಲಿ ತಬಲ ಶಿಕ್ಷಕರಾಗಿದ್ದ ದಯಾನಂದ ಧಾರವಾಡ ಮತ್ತು ಪ್ರಸ್ತುತ ವಿದ್ವಾನ್ ವಿನೋದ್...

ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘದ ಶತಮಾನೋತ್ಸವದ ಪೂರ್ವಭಾವಿ ಸಭೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಮುಂದಿನ ವರ್ಷ ಶತಮಾನೋತ್ಸವವನ್ನು ಆಚರಿಸಲಿದ್ದು, ಆದರ ಪೂರ್ವಭಾವಿ ಸಭೆಯು ಮಾ.18 ರಂದು ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶೇಖರ್ ಅಂಬೆಕಲ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಪ್ಪ ಗೌಡ,...

ಕಲ್ಮಕಾರಿನ ಯುವಕ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

ಕಲ್ಮಕಾರಿನ ಯುವಕನೋರ್ವ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆಮಾಡಿಕೊಂಡ ಘಟನೆ ಮಾ.22 ರಂದು ವರದಿಯಾಗಿದೆ. ಕಲ್ಮಕಾರು ಗ್ರಾಮದ ಮೆಂಟೆಕಜೆ ತೇಜಕುಮಾರ್ ಅವರ ಪುತ್ರ ಲೋಕೇಶ(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಚಿಕ್ಕಮಗಳೂರಿನಲ್ಲಿ ಜಿಯೋ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವಕ ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ,ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
error: Content is protected !!