Ad Widget

ಮಾ.18 ; ನಾಲ್ಕೂರಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ

ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಮಾ.18 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ಗ್ರಾಮ ವಾಸ್ತವ್ಯ ನಡೆಸಲಿದ್ದು, ಈ ಸಂದರ್ಭದಲ್ಲಿ ಅವರು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಿದ್ದಾರೆ. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್...

ಕ್ಷೇತ್ರ ಶಿಕ್ಷಣಾಧಿಕಾರಿ‌ ಬಿ.ಇ. ರಮೇಶ್ ಆಗಮನ, ಅಧಿಕಾರ ಸ್ವೀಕಾರ

ಸುಳ್ಯ‌ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಬಿ.ಇ. ರಮೇಶ್ ರವರು ಆಗಮಿಸಿದ್ದು, ಅಧಿಕಾರ ಸ್ವೀಕರಿಸಿದರು. ಪ್ರಭಾರ ಬಿ.ಇ.ಒ. ಶ್ರೀಮತಿ ವೀಣಾ ಎಂ.ಟಿ. ಯವರು ಅಧಿಕಾರ ಹಸ್ತಾಂತರ ಮಾಡಿದರು. ಬಿ.ಇ.ಒ. ಕಚೇರಿ ಸಿಬ್ಬಂದಿಗಳು ನೂತನ ಶಿಕ್ಷಣಾಧಿಕಾರಿಗಳನ್ನು ಸ್ವಾಗತಿಸಿದರು.
Ad Widget

ಬಂಗ್ಲೆಗುಡ್ಡೆ ಶಾಲೆಯ ಹೊಸ ಕೊಠಡಿ ನಿರ್ಮಾಣಕ್ಕೆ ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ವತಿಯಿಂದ ಅನುದಾನ ವಿತರಣೆ

ಕೊಲ್ಲಮೊಗ್ರದ ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕೊಠಡಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 1,50,000 ಅನುದಾನ ಮಂಜೂರಾಗಿದ್ದು, ಮಾ.16 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್.ಪಿ ಯವರು ಮಂಜೂರಾತಿ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಕಮಲ.ಎ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ...

ಸುಬ್ರಹ್ಮಣ್ಯ: ಗಾಂಗೇಯ ಟ್ರೋಫಿ ಕ್ರಿಕೇಟ್ ಪಂದ್ಯಾಟ

ಕ್ರಿಕೇಟ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹೊಂದಿದೆ. ಇದರೊಂದಿಗೆ ಗ್ರಾಮೀಣರು ಆಡುವ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಕೂಡಾ ಉತ್ತಮವಾದುದು. ಕ್ರಿಕೇಟ್ ಪಂದ್ಯಾಟಗಳು ಗ್ರಾಮೀಣ ಕ್ರೀಡಾಳುಗಳ ಪ್ರತಿಭಾ ಅನಾವರಣಕ್ಕೆ ವೇದಿಕೆಯಾಗಿದೆ. ಸುಮಾರು ೪ ದಶಕಗಳ ಇತಿಹಾಸ ಹೊಂದಿದ ಗಾಂಗೇಯ ಕ್ರಿಕೇಟ್ ತಂಡ ನಡೆಸಿದ ಈ ಪಂದ್ಯಾಟವು ಯುವಕರ ಕ್ರಿಕೇಟ್ ಆಸಕ್ತಿಯನ್ನು ಉತ್ತೇಜಿಸಲು...

ಗುತ್ತಿಗಾರು: ಪ್ರೌಢಶಾಲಾ ಕಂಪ್ಯೂಟರ್ ಬ್ಯಾಟರಿ ಕಳವು; ದೂರು ದಾಖಲು

ಗುತ್ತಿಗಾರು ‌ಸ.ಪ್ರೌಢಶಾಲಾ ಕಂಪ್ಯೂಟರ್ ನ ಹಳೆಯ ಬ್ಯಾಟರಿಗಳನ್ನು ಕಳವುಗೈದಿರುವ ಬಗ್ಗೆ ಶಾಲಾ ಮುಖ್ಯಸ್ಥರು ದೂರು ದಾಖಲಿಸಿದ್ದಾರೆ. ಇಲಾಖೆಯಿಂದ ಪೂರೈಕೆಯಾಗಿದ್ದ 16 ಬ್ಯಾಟರಿಗಳು ಕಳವಾಗಿದ್ದು, ಈ ಬ್ಯಾಟರಿಗಳ ಅಂದಾಜು ಮೌಲ್ಯ 16 ಸಾವಿರ ಎನ್ನಲಾಗಿದ್ದು, ಮಾ.12ರಂದು ಕಳವುಗೈಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ‌ 380, 454, 457 ಐಪಿಸಿಯಂತೆ ದೂರು...

ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಪುರುಷ ದೈವ ಗಳಿಗೆ ಸಂಬಂಧಪಟ್ಟ ನಿರಂಜನ್ ಕಡ್ಲಾರುರವರ ಸಾಹಿತ್ಯದ ಭಕ್ತಿಗೀತೆ ಬಿಡುಗಡೆ

ಶ್ರೀ ರಾಜ್ಯ ದೈವ ಪುರುಷ ದೈವ ದೈವಸ್ಥಾನ ಕಂದ್ರಪ್ಪಾಡಿ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ನಿರಂಜನ್ ಕಡ್ಲಾರು ಸಾಹಿತ್ಯದ ಭಕ್ತಿಗೀತೆಗಳನ್ನು ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್ ಅಂಗಾರ ಬಿಡುಗಡೆಗೊಳಿಸಿದರು. ಅವರು ಮಾರ್ಚ್ 14ರಂದು ಕಂದ್ರಪ್ಪಾಡಿ ಜಾತ್ರೋತ್ಸವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಕ್ತಿ ಗೀತೆಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ಅಭಿವೃದ್ಧಿ...

5, 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ (ಪಬ್ಲಿಕ್)ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. 10 ದಿನಗಳ ಬಳಿಕ ಅಂದರೆ ಮಾ.27ರಿಂದ ಪರೀಕ್ಷೆ ನಡೆಸಲು ಸೂಚನೆ ನೀಡಿರುವ ಹೈಕೋರ್ಟ್, ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳುವಂತಿಲ್ಲ, ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಶಾಲೆಗೆ ಮಾತ್ರವೇ ಕಳಿಸಬೇಕು ಎಂದೂ ಸೂಚನೆ ನೀಡಿದೆ. 5 ಮತ್ತು 8ನೇ...

ಮಾ.20: ಉಬರಡ್ಕ ಯುವಕ ಮಂಡಲದ ಸುವರ್ಣ ಮಹೋತ್ಸವ

ಉಬರಡ್ಕ ಮಿತ್ತೂರು ಗ್ರಾಮದ ಯುವಕ ಮಂಡಲ ಉಬರಡ್ಕ ಮಿತ್ತೂರು ಹಾಗೂ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಪ್ರಥಮ ನೋಂದಾಯಿತ ಯುವಕ ಮಂಡಲದ ಸುವರ್ಣ ಮಹೋತ್ಸವ ಆಚರಣೆಯು ಮಾ.20 ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್....

ಸುಳ್ಯ ಪ್ರೆಸ್ ಕ್ಲಬ್ ಗೆ ಬೆಳ್ಳಾರೆಯ ಗ್ಲೋಬಲ್ ಸರ್ವಾಲೆನ್ಸ್ ನವರಿಂದ ಸಿಸಿ ಕ್ಯಾಮೆರಾ ಕೊಡುಗೆ – ಉದ್ಘಾಟನೆ

ಸುಳ್ಯದ ಅಂಬೆಟಡ್ಕದಲ್ಲಿರುವ ಪ್ರೆಸ್ ಕ್ಲಬ್ ಕಟ್ಟಡಕ್ಕೆ ಬೆಳ್ಳಾರೆಯ ಗ್ಲೋಬಲ್ ಸರ್ವಾಲೆನ್ಸ್ ನವರು ಸಿಸಿ ಕ್ಯಾಮೆರಾ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದು ಇದರ ಉದ್ಘಾಟನಾ ಸಮಾರಂಭ ಮಾ.15 ರಂದು ಸಂಜೆ ನಡೆಯಿತು. ಸುಳ್ಯ ಠಾಣಾ ಕ್ರೈಂ ಎಸ್.ಐ ಶಾಹಿದ್ ಆಫ್ರಿದಿರವರು ನೂತನ ಸಿಸಿ ಕ್ಯಾಮೆರಾವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಗ್ಲೋಬಲ್ ಸರ್ವಾಲೆನ್ಸ್...

ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಹರೀಶ್ ಬಂಟ್ವಾಳ್ ಪುನರಾಯ್ಕೆ

ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಮುಂದಿನ ಎರಡು ವರ್ಷ ಕ್ಕೆ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕುಕ್ಕೆಟ್ಟಿ ಹಾಗೂ ಕೋಶಾಧಿಕಾರಿಯಾಗಿ‌ ರಮೇಶ್ ನೀರಬಿದಿರೆ ಆಯ್ಕೆಯಾದರು. ಮಾ.15 ರಂದು ಬೆಳಗ್ಗೆ ಸಂಘದ ಅಧ್ಯಕ್ಷ ಹರೀಶ್ ಬಂಟ್ವಾಳ ಅಧ್ಯಕ್ಷತೆಯಲ್ಲಿ...
Loading posts...

All posts loaded

No more posts

error: Content is protected !!