Ad Widget

ಅಡ್ತಲೆ : ಧಾರ್ಮಿಕ ಶಿಕ್ಷಣ ತರಗತಿ ಕಾರ್ಯಕ್ರಮ ಉದ್ಘಾಟನೆ

ನಾಗರಿಕ ಹಿತರಕ್ಷಣ ವೇದಿಕೆ ಅಡ್ತಲೆ ಮತ್ತು ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ವತಿಯಿಂದ ಸ.ಹಿ.ಪ್ರಾ. ಶಾಲೆ ಅಡ್ತಲೆ ಇದರ ವಠಾರದಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಕಾರ್ಯಕ್ರಮ ದಿನಾಂಕ 25.09.2022 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಉಳುವಾರು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಹಿತರಕ್ಷಣಾ ವೇದಿಕೆ ಆಡ್ತಲೆ ಇದರ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಆಡ್ತಲೆ ಇವರು ವಹಿಸಿದ್ದರು.ಗೌರವ ಸಲಹೆಗಾರರಾದ ಶ್ರೀ ಗಣೇಶ್ ಮಾಸ್ತರ್ ಅಡ್ತಲೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸನಾತನ ಹಿಂದೂ ಜನಜಾಗೃತಿ ವೇದಿಕೆಯ ಪ್ರವರ್ತಕರಾದ ಶ್ರೀ ಧನಂಜಯ ಬಿ ಇವರು ಧಾರ್ಮಿಕ ಪ್ರವಚನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಬಿದ್ರುಪಣೆ, ಗ್ರಾಮ ಪಂಚಾಯತ್ ಅರಂತೋಡು ಇದರ ಉಪಾಧ್ಯಕ್ಷರಾದ ಕುಮಾರಿ ಶ್ವೇತಾ ಅರಮನೆಗಯ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕೇಶವ ಅಡ್ತಲೆ ,ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಅಡ್ತಲೆ ಪರಿಸರದ ದೈವಸ್ಥಾನಗಳ ಪೂಜಾರಿ ವರ್ಯಯರಾದ ಶ್ರೀ ತೀರ್ಥರಾಮ ಅಡ್ತಲೆ, ಶ್ರೀ ಗೋಪಾಲಕೃಷ್ಣ ಪಿಂಡಿಮನೆ , ಶ್ರೀ ನಾರಾಯಣ ಮೇಲಡ್ತಲೆ ಬೆದ್ರುಪಣೆ ಇವರು ವಹಿಸಿದ್ದರು. ವೇದಿಕೆಯ ಸದಸ್ಯರಾದ ಶ್ರೀಲೋಹಿತ್ ಮೇಲಡ್ತಲೆ ಇವರು ಸ್ವಾಗತಿಸಿ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀ ಮೋಹನ್ ಕಿನಾಲ ಅಡ್ತಲೆ ಇವರು ಧನ್ಯವಾದವನ್ನು ನೆರವೇರಿಸಿದರು.ಶ್ರೀ ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ನಾಗರಿಕ ಹಿತ ರಕ್ಷಣ ವೇದಿಕೆ ಅಡ್ತಲೆ ಹಾಗೂ ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ಸದಸ್ಯರು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading