- Thursday
- October 31st, 2024
ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಅರಂತೋಡು ಗ್ರಾಮದಲ್ಲಿ ಯೂತ್ ಜೋಡೊ ಬೂತ್ ಜೋಡೊ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ "ಭಾರತ್ ಜೋಡೊ" ಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ್, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್...
ಶತಮಾನದ ಹೊಸ್ತಿಲಿನಲ್ಲಿರುವ ಮರ್ಕಂಜ ಗ್ರಾಮದ ಮಿತ್ತಡ್ಕ ಮರ್ಕಂಜ ಶಾಲಾ ಅಭಿವೃದ್ಧಿಗೆ ರೂ.50 ಲಕ್ಷ ಅನುದಾನ ಒದಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರಿಗೆ ಶಾಲಾ ಪೋಷಕ ಪ್ರತಿನಿಧಿ ಜಗನ್ನಾಥ ಜಯನಗರ ಮನವಿ ಸಲ್ಲಿಸಿದ್ದಾರೆ.ಬೆಂಗಳೂರು ವಿಧಾನಸೌಧದಲ್ಲಿ ಜಗನ್ನಾಥ ಅವರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಶಾಲಾ ಅಭಿವೃದ್ಧಿಗೆ ಅನುದಾನ ಮಂಜೂರುಗೊಳಿಸಲು ಮನವಿ ಸಲ್ಲಿಸಿದರು....
ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ ವಳಲಂಬೆಯ ಸಮೀಕ್ಷಾ ಎಂಬ ಬಾಲಕಿಗೆ ಸುಮಾರು 56800 ರೂ ಹಣವನ್ನು ಕೊಲ್ಲಮೊಗ್ರ ಗ್ರಾಮದಿಂದ "ಸಹಾಯ ಹಸ್ತ" ಎಂಬ ವಾಟ್ಸಪ್ ಗ್ರುಪ್ ಮೂಲಕ ಸಂಗ್ರಹವಾಗಿತ್ತು. ಉದಯ ಶಿವಾಲ ಈ ವಾಟ್ಸಪ್ ಗ್ರುಪ್ ನ್ನು ರಚಿಸಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ನೆರೆ ಹಾನಿ ಮತ್ತು ಪ್ರವಾಹಕ್ಕೆ ಸಿಲುಕಿ ಚೇತರಿಸಿಕೊಳ್ಳುತ್ತಿರುವ ಈ ಗ್ರಾಮದಲ್ಲಿ...
ಪೋಲೀಸ್ ಇಲಾಖೆಯ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಪೊಲೀಸ್ ಇಲಾಖೆಯಲ್ಲಿ ಸಿಎಆರ್, ಡಿಎಆರ್‌ನಲ್ಲಿ ಖಾಲಿಯಿರುವ 3,064 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಖಾಲಿರುವ ಹುದ್ದೆಗಳಿಗೆ https://ksp-recruitment.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಒಟ್ಟು 3,064 ಹುದ್ದೆಗಳಿಗೆ ಅರ್ಜಿ ಆಹ್ವಾನ ಪುರುಷ-2,996 ಪುರುಷ, ತೃತೀಯ ಲಿಂಗಿಗಳಿಗೆ 68 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಶೀಘ್ರ ಪೊಲೀಸ್...
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಹಾಗೂ ರಿನೀವಲ್ ಮಾಡುವ ವಿಶೇಷ ಕ್ಯಾಂಪ್ ಇಂದು ನಡೆಯಿತು. ವಿಕಲಚೇತನ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಂಟಿಯಾಗಿ ಈ ಕ್ಯಾಂಪ್ ನಡೆಯಿತು. ತಾಲೂಕು ಪಂಚಾಯತ್ ನ ವಿಕಲಚೇತನ ರ ಇಲಾಖೆಯ ಸಂಯೋಜಕ ಚಂದ್ರ ಶೇಖರ್, ನಗರ ಪಂಚಾಯತ್ ನ ವಿಕಲಚೇತನ ಇಲಾಖೆಯ...
ಸುಳ್ಯ ರೈತ ಉತ್ಪಾದಕ ಕಂಪೆನಿ ನಿಯಮಿತ ಇದರ ವಾರ್ಷಿಕ ಮಹಾಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸೆ. 10ರಂದು ಶ್ರೀ ದುರ್ಗಾಪರಮೇಶ್ವರಿ ಸಭಾಭವನ ಕೇರ್ಪಳ ಸುಳ್ಯದಲ್ಲಿ ಇಂದು ನಡೆಯಿತು. ಸುಳ್ಯ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಮಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ,...
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ನೆಹರು ಪದವಿಪೂರ್ವ ಕಾಲೇಜು ಅರಂತೋಡು ಇದರ ಜಂಟಿ ಆಶ್ರಯದಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಪ್ರಥಮ ಸ್ಥಾನ ಗಳಿಸಿ 23ನೇ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಚಿತಾ ಎಂ ಪಿ, ಅನನ್ಯ ಎಂ ಕೆ, ವರ್ಷಿಣಿ ಟಿ, ಮಾನ್ಯಶ್ರೀ, ಹಸ್ತಾ ಕೆ ಎಂ,...
ಜೇಸಿ ಸಪ್ತಾಹದ ಅಂಗವಾಗಿ ಜೇಸಿಐ ಸುಳ್ಯ ಸಿಟಿ ಮತ್ತು ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯ ದ ಸಹಭಾಗಿತ್ವದೊಂದಿಗೆ ಕೆ.ವಿ.ಜಿ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು ಸಭಾಧ್ಯಕ್ಷತೆ ಯನ್ನು ಘಟಕಾದ್ಯಕ್ಷ ಬಶೀರ್ ಯು ಪಿ ವಹಿಸಿದ್ದರು ಡಾ| ಶೋಭಾ ಚಿದಾನಂದ ರವರು ಉದ್ಘಾಟಿಸಿದರು. ಅತಿಥಿಗಳಾಗಿ ಡಾ| ನೀಲಾಂಬಿಕಾ ನಟರಾಜನ್, ಡಾ| ಮಹಾಂತಾ ದೇವ್ರು, ಡಾ|...
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ದಲ್ಲಿ ಸೆಪ್ಟೆಂಬರ್ 10 ರಿಂದ 12 ತನಕ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟ ಹಾಗೂ ದಕ್ಷಿಣ ಮಧ್ಯ ಕ್ಷೇತ್ರ ವಿಭಾಗ ಕಬಡ್ಡಿ ಪಂದ್ಯಾಟದಲ್ಲಿ, ಜ್ಞಾನದೀಪದ 17 ರ ವಯೋಮಾನದ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹಿನ್ನಲೆಯಲ್ಲಿ ಮಹಿಳೆಯರನ್ನು ಪ್ರಥಮವಾಗಿ ಒಗ್ಗೂಡಿಸಿಕೊಂಡು ಅವರಿಗೆ ಸ್ವ ಉದ್ಯೋಗ ನೀಡಿ, ಬಳಿಕ ಅವರನ್ನು ಪಕ್ಷ ಸಂಘಟನೆಯಲ್ಲಿ ದುಡಿಯಲು ಪೂರಕ ವಾತಾವರಣ ಕಲ್ಪಿಸುವುದು ಹಾಗೂ ಇದನ್ನು ಗ್ರಾಮ ಮಟ್ಟದಿಂದ ಜಾರಿಗೆ ತರುವ ಬಗ್ಗೆ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಜೆಡಿಎಸ್ ಪಕ್ಷದ ಮಹಿಳಾ ಯುವ ರೈತ...
Loading posts...
All posts loaded
No more posts