Ad Widget

ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷರಾಗಿ ಗೋಪಾಲ ಪೆರಾಜೆ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷರಾಗಿ ಶ್ರೀ ಗೋಪಾಲ ಪೆರಾಜೆ ಆಯ್ಕೆ ಆಗಿದ್ದಾರೆ. ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀ ನವೀನ್ ಅಂಬೇಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

. . . . . . . . .

ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶನದಲ್ಲಿ ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಸಾಹಿತ್ಯಾಸಕ್ತರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

. . . . . . .

ಘಟಕದ ಗೌರವ ಕಾರ್ಯದರ್ಶಿಗಳನ್ನಾಗಿ ಶ್ರೀಮತಿ ಸಂಗೀತ ರವಿರಾಜ್ ಚೆಂಬು ಮತ್ತು ಶ್ರೀ ಜಗದೀಶ ಕುಂಬಳಚೇರಿ ಪೆರಾಜೆ ಆಯ್ಕೆಯಾದರು. ಶ್ರೀಮತಿ ಟೀನಾ ಚರಣ್ ಸಂಪಾಜೆ ಅವರನ್ನು ಕೋಶಾಧಿಕಾರಿಯನ್ನಾಗಿ ನೇಮಿಸಲಾಯಿತು.

ಸಭೆಯ ಆರಂಭದಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಕೇಶವ ಕಾಮತ್ ಘಟಕದ ಉದ್ದೇಶ ಮತ್ತು ಪ್ರಸ್ತುತೆಯ ಕುರಿತು ಮಾತನಾಡಿದರು. ಕೊಡಗು ಜಿಲ್ಲಾ ಕ.ಸಾ. ಪ. ಮಾಜಿ ಅಧ್ಯಕ್ಷರಾಗಿದ್ದ ಟಿ.ಪಿ. ರಮೇಶ್ ಅವರು “ಘಟಕವು ಈ ವಲಯದಲ್ಲಿ ಸಾಹಿತ್ಯಾಸಕ್ತರನ್ನು ಸೇರಿಸಿಕೊಂಡು ಕನ್ನಡದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಬೇಕು” ಎಂದರು.

ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಶ್ರೀ ನವೀನ್ ಅಂಬೆಕಲ್ಲು ಅವರು “ಘಟಕವು ಕ.ಸಾ.ಪ. ನಿಯಮಾನುಸಾರ ಪೂರ್ಣ ಪ್ರಮಾಣದಲ್ಲಿ ಪದಾಧಿಕಾರಿಗಳನ್ನು ನೇಮಿಸಿಕೊಂಡು ಹೆಚ್ಚು ಹೆಚ್ಚು ಕನ್ನಡದ ಸಾಹಿತ್ಯ ಕಾರ್ಯಕ್ರಮಗಳ ಹಮ್ಮಿ ಕೊಳ್ಳುವಂತಾಗಬೇಕು”  ಎಂದರು.

ಸಭೆಯಲ್ಲಿ ಶ್ರೀ ಲೋಕನಾಥ ಅಮಚೂರು, ಶ್ರೀಮತಿ ಇಂದಿರಾ ದೇವಿಪ್ರಸಾದ್ ಸಂಪಾಜೆ, ಕೊಡಗು ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ರೇವತಿ ರಮೇಶ್, ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರೇಮ್ ಕುಮಾರ್, ಶ್ರೀ ಅಂಬೆಕಲ್ಲು ಕುಶಾಲಪ್ಪ, ಡಾ. ಯೋಗಿಶ್ ಬಿ.ಎಸ್.
ಶ್ರೀ ಮಂಜುನಾಥ ವಿ.ಟಿ. ಶ್ರೀ ಶ್ರೀಧರ್ ಹೂವಳ್ಳಿ ಮತ್ತು ಸಂಪಾಜೆ ವಲಯ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಕೆಯು ರಂಜಿತ್ ಗೌರವ ಕಾರ್ಯದರ್ಶಿ ಮಡಿಕೇರಿ ಕ.ಸಾ.ಪ. ಕೊನೆಯಲ್ಲಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading