Ad Widget

ಕವನ : ಬದುಕಿನ ಗುರುತು

ಬದುಕ ಪುಟಗಳಲಿ ಕನಸಿನ ಗುರುತು…
ಸೋಲಿನ ಪ್ರತಿ ಹೆಜ್ಜೆಯಲೂ ಗೆಲುವಿನ ಗುರುತು…
ನೋವಿನ ಪ್ರತಿ ಹೆಜ್ಜೆಯಲೂ ನಲಿವಿನ ಗುರುತು…
ತಿಳಿದೂ ತಿಳಿಯದೆಯೇ ಸಾಗುವ ಪಯಣ, ಹೆಜ್ಜೆ ಗುರುತಿನ ಜೊತೆ ನಿಲ್ಲದ ಪಯಣ…
ಕೊನೆಯೇ ಇರದ ಈ ಬದುಕಲಿ, ಕೊನೆಯಾಗುವುದು ನಮ್ಮಯ ಬದುಕು…
ಬದುಕಿನ ಈ ಪುಸ್ತಕದಿ ಪುಟಗಳು ನೂರು, ನೋಡುವುದು ಹೇಗೆ ಮುಂದಿನ ಪುಟವ…
ಪ್ರತಿಯೊಂದು ಪುಟಗಳಲೂ ನಾಳಿನ ಬದುಕು, ಪ್ರತಿ ಹೆಜ್ಜೆ ಗುರುತಿನಲೂ ಇಂದಿನ ಬದುಕು, ಸೋಲು ಗೆಲುವಿನ ಜೊತೆ ನಿಲ್ಲದ ಬದುಕು…
ಇಂದಿನ ಈ ಸೋಲು ನಾಳಿನ ಗೆಲುವು, ಪ್ರತಿಯೊಂದು ಸೋಲಿನಲೂ ಗೆಲುವಿನ ಪಾಠ, ಪ್ರತಿಯೊಂದು ಗೆಲುವಿನಲೂ ಬದುಕಿನ ಪಾಠ ಕಲಿಯುತ ಕಲಿಸುತ ಸಾಗುವ ಬದುಕು…
ಎಲ್ಲೂ ನಿಲ್ಲದೇ ಸಾಗುವ ಪಯಣ, ಈ ಬದುಕಿನ ಪಯಣ…
ಬಿಟ್ಟು ಹೋಗುವುದು ಹೆಜ್ಜೆಯ ಗುರುತು, ಕೊನೆಗೆ ಬಿಟ್ಟು ಹೋಗುವುದು ಹೆಜ್ಜೆಯ ಗುರುತು…

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!