- Friday
- May 8th, 2026
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಲೆ ಕುಡಿಯ ಜನಾಂಗದ ಪಂಚಪರ್ವ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿದ್ದರ ವಿರುದ್ಧ ಪ್ರತಿಭಟನೆ ನಡೆಯಿತು. ಮಲೆಕುಡಿಯ ಹಿತ ರಕ್ಷಣೆಯ ವೇದಿಕೆಯ ಸಂಚಾಲಕರಾದ ಪದ್ಮಕುಮಾರ ಗುಂಡಡ್ಕ ಪ್ರಸ್ತಾವಿಕವಾಗ ಮಾತನಾಡಿ ದೇವಸ್ಥಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವಾಗ ಭಕ್ತಿಯಿಂದ ಸೇವೆ ಸಲ್ಲಿಸಿದವರು ಮಲೆಕುಡಿಯ ಜನಾಂಗ, ಇದೀಗ ಏಕಾಎಕಿ ಸೇವೆಯಿಂದ ವಜಾಗೊಳಿಸಿದ್ದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು....
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಂಪಾಜೆ ಸುಳ್ಯ ಇವರ ಆಶ್ರಯದಲ್ಲಿ ಮೇ.5 ರಂದು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕೊಡಗು ಕೆನರಾ ಬಂಡಾಯ 1837 ಕೃತಿ ಲೋಕಾರ್ಪಣೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ, ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಸುಳ್ಯದ ಕನ್ನಡ ಭವನ ಅಂಬೆಟಡ್ಕದಲ್ಲಿ...
ಕಲ್ಮಕಾರು ಗ್ರಾಮದ ಕೋನಡ್ಕ ಮನೆ ಶ್ರೀಮತಿ ಕಮಲಾಕ್ಷಿ ಮತ್ತು ಶ್ರೀ ಗಿರಿಯಪ್ಪ ಗೌಡರ ಪುತ್ರ ಹಿತೇಶ್ ರವರ ವಿವಾಹವು ನಾಲ್ಕೂರು ಗ್ರಾಮದ ಕೊಲ್ಯಮನೆ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ತಿರುಮಲೇಶ್ವರ ಗೌಡರ ಪುತ್ರಿ ಚೈತ್ರಾ ರವರೊಂದಿಗೆ ಮೇ.04 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಜನರ ಕುಂದು-ಕೊರತೆಗಳನ್ನು ಈಡೇರಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಮೇ.06ರಂದು ಬೆಳಗ್ಗೆ 10.00ರಿಂದ ಮಧ್ಯಾಹ್ನ 1.00 ಗಂಟೆಯ ತನಕ ಜರುಗಲಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅಲೆಕ್ಸಾಂಡರ್ ಡಿಸೋಜ, ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿಯವರು ವಹಿಸಲಿದ್ದಾರೆ.
