- Saturday
- September 12th, 2026
ಕೊಲ್ಲಮೊಗ್ರು ಗ್ರಾಮದ ಮೋಹನಾಂಗಿ ದೇವಿದಾಸ್ ಕಜ್ಜೋಡಿ ಅವರ ಮನೆಯಲ್ಲಿ ಮೇ.22 ರಂದು ಶ್ರೀ ಪಾಷಾಣಮೂರ್ತಿ ದೈವಗಳ ನೇಮೋತ್ಸವವು ನಡೆಯಿತು.ಸಂಜೆ ಭಂಡಾರ ತೆಗೆದು ನಾಲ್ಕು ಪಾಷಾಣಮೂರ್ತಿ ದೈವಗಳ ನೇಮೋತ್ಸವ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಯವರು ಮೇ. 26 ರಂದು ಸುಳ್ಯ ತಾಲೂಕು ಕಛೇರಿಗೆ ಭೇಟಿ ನೀಡಲಿದ್ದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಆದುದರಿಂದ ಸಾರ್ವಜನಿಕ ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲು ಸಲ್ಲಿಸಬಹುದು ಎಂದು ತಹಶೀಲ್ದಾರ್ ಕು. ಅನಿತಾಲಕ್ಷ್ಮೀ ತಿಳಿಸಿದ್ದಾರೆ.
ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್‌ನಲ್ಲಿ ಫ್ಯಾಷನ್ ವೆಂಚರ್ ಪಾಲುದಾರಿಕೆಯ 'ಗೋಕುಲಂ ಕಿಡ್ಸ್ ವೇರ್' ಮಕ್ಕಳ ಉಡುಪುಗಳ ಮಳಿಗೆ ಶುಭಾರಂಭ ಗೊಂಡಿತ್ತು. ಮಳಿಗೆಯನ್ನು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿ ಮಾತನಾಡಿದರು.ಅವರು ವ್ಯಾಪಾರ ಮಾಡುವವರಿಗೆ, ಹೂಡಿಕೆದಾರರಿಗೆ, ಸ್ವ ಉದ್ಯೋಗ ಮಾಡುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಆಗ ಮಾತ್ರ ಸ್ವಾವಲಂಬನೆ, ಉದ್ಯೋಗ ಸೃಷ್ಠಿ ಮತ್ತು...
