ನಾಲ್ಕೂರು ಗ್ರಾಮದ ಒಂದನೇ ವಾರ್ಡ್ ನ ಬಿಜೆಪಿ ಬೂತ್ ಸಮಿತಿ ಅದ್ಯಕ್ಷರಾದ ನಿಶಿತ್ ಮೂರ್ಜೆ ಅವರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮ ಅ.26 ರಂದು ನಡೆಯಿತು. ಸುಳ್ಯ ಬಿಜೆಪಿ ಮಂಡಲ ಅದ್ಯಕ್ಷರಾದ ಹರೀಶ್ ಕಂಜಿಪಿಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರದಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಗುತ್ತಿಗಾರು ಗ್ರಾಮಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಚಾರ್ಮತ, ಲೀಲಾವತಿ ಅಂಜೇರಿ, ಗುತ್ತಿಗಾರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಪ್ರಮೀಳಾ ಬಾಸ್ಕರ್ ಎರ್ಧಡ್ಕ, ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿಯಾದ ಮೇಘನ್ ಕಲ್ಲಾಜೆ, ಎ.ಪಿ.ಎಂ.ಸಿ ಸದಸ್ಯರಾದ ಬಾಲಕೃಷ್ಣ ಉಜ್ಜಿರಡ್ಕ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅದ್ಯಕ್ಷರಾದ ವಿನಯ ಮುಳುಗಾಡು ಹಾಗೂ ಬಿಜೆಪಿಯ ಹಿರಿಯ-ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ