- Sunday
- September 6th, 2026
ಸುಳ್ಯ: ಮುಸ್ಲಿಂ ಸಮುದಾಯದ ವಿರುದ್ದವಾಗಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಪ್ರಚೋದನಾಕಾರಿ ಹೇಳಿಕೆ ಹಾಗೂ ಪ್ರವಾದಿ (ಸ-ಅ)ನಿಂದನೆಯನ್ನು ವಿರೋಧಿಸಿಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆದೇಶ ಮೇರೆಗೆನಾಳೆ ಸೋಮವಾರ ಸಂಜೆ 4 ಗಂಟೆಗೆ ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ.ಪ್ರಚೋದನೆಯನ್ನು ಪ್ರಬುದ್ಧತೆಯಿಂದ ಎದುರಿಸೋಣವೆಂಬ ಶೀರ್ಷಿಕೆಯಲ್ಲಿ ಜಿಲ್ಲೆಯ ಹನ್ನೆರಡು ವಲಯದಲ್ಲಿ ಏಕಕಾಲಕ್ಕೆ ಪ್ರತಿಭಟನೆನಡೆಯಲಿದೆಯೆಂದು SKSSF ಸುಳ್ಯ...
ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಕೊಡಮಾಡುವ ರಾಷ್ಟ್ರ ಮಟ್ಟದ ವಿದ್ಯಾ ವಿಭೂಷಣ ಪ್ರಶಸ್ತಿಗೆ ಈ ವರ್ಷ ರಾಜ್ಯ ಮಟ್ಟದ ತರಬೇತುದಾರ ಕೆ.ಎಂ.ಇಕ್ಬಾಲ್ ಬಾಳಿಲರವರು ಆಯ್ಕೆ ಗೊಂಡಿರುತ್ತಾರೆ.ಆಯ್ಕೆ ಘೋಷಣೆ ಮತ್ತು ಪಶಸ್ತಿ ಪತ್ರವನ್ನು ಅಕ್ಟೋಬರ್ 10ರಂದು ಗೂಗುಲ್ ಮೀಟ್ ಮೂಲಕ ನಡೆಸಲಾಗಿದ್ದು ಕೋವಿಡ್ ಸಂಪೂರ್ಣ ಮುಕ್ತಿಗೊಂಡ ಬಳಿಕ ಅಂತಾರಾಷ್ಟ್ರೀಯ ಸಮ್ಮೇಳದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡುವುದಾಗಿ ಸಂಘಟಕರು ತಿಳಿಸಿದ್ದಾರೆ.ಶೈಕ್ಷಣಿಕ...
ಸುಳ್ಯದ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಉಚಿತ ಉದ್ಯೋಗ ತರಬೇತಿ ಶಿಬಿರ ಇಂದು ನಡೆಯಿತು. ಇದರ ಉದ್ಘಾಟನೆಯನ್ನು ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಾರಾಯಣ ಕುಡುವ, ಜಗದೀಶ್ ಜೋಗಿ, ಬಾಸುಮ ಕೊಡಗು, ಮನೋಜ್ ಕಡಬ ಉಪಸ್ಥಿತರಿದ್ದರು. ಈ ತರಬೇತಿ ಶಿಬಿರವನ್ನು ಪುರುಷೋತ್ತಮ ಕೇರ್ಪಳ, ಜಯಪ್ರಸಾದ್ ಕೊಯಿನಾಡು,ಸುಮತಿ ನಾಯಕ್ ಸಂಘಟಿಸಿದ್ದರು.
ಪಂಜ : ಯಾವುದೇ ವಿಚಾರಗಳ ವಿಪರೀತವಾದ ಆದರೆ ಅದರಿಂದಲೇ ಹಾನಿಯಾಗುತ್ತದೆ ಎನ್ನುವುದನ್ನು ಮಹರ್ಷಿ ಅರವಿಂದರು ಹೇಳಿದ್ದರು. ಅದು ಧರ್ಮ, ಜಾತಿ ಸೇರಿದಂತೆ ಯಾವುದೇ ಆದರೂ ವಿಪರೀತವಾದರೆ ಒಂದು ದಿನ ಅದರಿಂದಲೇ ಹೊಡೆತ, ಅದರಿಂದಲೇ ನಾಶ ನಿಶ್ಚಿತ ಎನ್ನುವುದನ್ನು ಮಹರ್ಷಿಗಳು ಹೇಳಿದ್ದರು ಎಂದು ಲೀಡರ್ ಎಕ್ಸಲೆನ್ಸ್ ಸೊಲ್ಯುಶನ್‌ನ ಮುಖ್ಯಾಧಿಕಾರಿ, ಧಾರ್ಮಿಕ ಚಿಂತಕ ಧೀರೇನ್ ಪರಮಲೆ ಹೇಳಿದರು. ಅವರು...
ಹರಿಹರ ಪಲ್ಲತ್ತಡ್ಕದ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಅ.08 ರಂದು ಉನ್ನತ ಸುಪಾರಿ ಟ್ರೇಡರ್ಸ್ ಶುಭಾರಂಭಗೊಂಡಿದ್ದು, ಪೂಜಾ ವಿಧಿ-ವಿಧಾನಗಳನ್ನು ಶ್ರೀ ಹರಿಹರೇಶ್ವರ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹೇಶ್ ಭಟ್ ಕಿರಿಭಾಗ, ಶ್ರೀಧರ್ ಭಾಗವತ್ ಕಜ್ಜೋಡಿ, ಶರತ್ ಭಟ್ ಕಜ್ಜೋಡಿ, ಮಂಜುನಾಥ ಉತ್ರಂಬೆ, ಬಿದ್ದಪ್ಪ ಕಾಲೂರು, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್...
